2008ರ ಸಿಡ್ನಿ ಟೆಸ್ಟ್: ನನ್ನ ಆ 2 ತಪ್ಪುಗಳಿಂದಾಗಿ ಭಾರತ ಸೋಲುವಂತಾಯಿತು - ಸ್ವೀವ್ ಬಕ್ನರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2008ರ ಸಿಡ್ನಿ ಟೆಸ್ಟ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿದೆ. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್ಫೀಲ್ಡ್ ಅಂಪೈರ್ ಸ್ಟೀವ್ ಬಕ್ನರ್ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2008ರ ಸಿಡ್ನಿ ಟೆಸ್ಟ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದಾಗಿದೆ. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್ಫೀಲ್ಡ್ ಅಂಪೈರ್ ಸ್ಟೀವ್ ಬಕ್ನರ್ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.
ಆ ಪಂದ್ಯದಲ್ಲಿ ತಾವು ಎರಡು ತಪ್ಪುಗಳನ್ನು ಮಾಡಿದ್ದಾಗಿ ಸ್ಟೀವ್ ಬಕ್ನರ್ ಇದೀಗ ಒಪ್ಪಿಕೊಂಡಿದ್ದಾರೆ. ಅದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡುವೆ 'ಮಂಕಿ ಗೇಟ್' ವಿವಾದವೂ ನಡೆದಿತ್ತು.
12 ವರ್ಷಗಳ ಹಿಂದೆ ನಡೆದ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಾಟಕೀಯ ರೀತಿಯಲ್ಲಿ ಐದನೇ ದಿನದಂದು ಜಯ ದಾಖಲಿಸಿತ್ತು. ಇದಕ್ಕೆ ತಮ್ಮಿಂದಿ ಹೊರಬಂದ ಎರಡು ತಪ್ಪು ನಿರ್ಧಾರಗಳು ಕಾರಣ ಎಂದು ಬಕ್ನರ್ ಇದೀಗ ಬಾಯ್ಬಿಟ್ಟಿದ್ದಾರೆ.
ಅಂದಹಾಗೆ ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ವಿಚಾರದಲ್ಲೂ ತಾವು ಎರಡು ಬಾರಿ ತಪ್ಪು ನಿರ್ಧಾರ ನೀಡಿದ್ದಾಗಿ ಬಕ್ನರ್ ಹೇಳಿಕೊಂಡಿದ್ದರು. ಸಚಿನ್ ಎದುರು ಬೇಕೆಂದೇ ತಪ್ಪು ನಿರ್ಧಾರ ನೀಡುತ್ತಾರೆ ಎಂಬ ಆರೋಪವೂ ವೆಸ್ಟ್ ಇಂಡೀಸ್ ಮೂಲಕ ಅನುಭವಿ ಅಂಪೈರ್ ಬಕ್ನರ್ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


