ಕ್ರಿಕೆಟ್

ಟೀಂ ಇಂಡಿಯಾ ಮಾಜಿ ಆಲ್  ರೌಂಡರ್ ಬಾಪು ನಾಡಕರ್ಣಿ ನಿಧನ

ಭಾರತದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ (86) ಅವರ ನಿಧನಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದೆ. ಅವರು ಶುಕ್ರವಾರ ನಿಧನರಾದ್ದಾರೆ.

ಟೀಂ ಇಂಡಿಯಾ ಮಾಜಿ ಆಲ್  ರೌಂಡರ್ ಬಾಪು ನಾಡಕರ್ಣಿ ನಿಧನ
ಬಾಪು ನಾಡಕರ್ಣಿ
Published On :

ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ (86) ಅವರ ನಿಧನಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದೆ. ಅವರು ಶುಕ್ರವಾರ ನಿಧನರಾದ್ದಾರೆ.

ನಾಡಕರ್ಣಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅವರ ಸಾವಿನೊಂದಿಗೆ ಕ್ರಿಕೆಟ್ ಜಗತ್ತಿಗೆ ನಷ್ಟವಾಗಿದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಮುಂಬೈನ ಮಾಜಿ ನಾಯಕ ಮಿಲಿಂದ್ ರೆಗೆ ಸೇರಿದಂತೆ ಅನೇಕ ಕ್ರಿಕೆಟಿಗರು ನಾಡಕರ್ಣಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಡಿಸೆಂಬರ್ 1955 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಚೊಚ್ಚಲ ಪ್ರವೇಶ ಮಾಡಿದ್ದ ನಾಡಕರ್ಣಿ 41 ಟೆಸ್ಟ್ ಪಂದ್ಯಗಳನ್ನಾಡಿ , 25.70 ಸರಾಸರಿಯಲ್ಲಿ 1414 ರನ್ ಗಳಿಸಿದರು.

ಚೆಂಡಿನೊಂದಿಗೆ ಅವರ ಕ್ಲಿನಿಕಲ್ಎಕಾನಮಿ ಅವರಿಗೆ ಹಲವಾರು ಪ್ರಶಂಸೆ ಸಿಕ್ಕುವಂತೆ ಮಾಡಿದ್ದು 41 ಟೆಸ್ಟ್ ಪಂದ್ಯಗಳಲ್ಲಿ, ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ 88 ವಿಕೆಟ್ ಗಳನ್ನು ಗಳಿಸಿದ್ದರು.

ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿ ಮತ್ತು  ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಜಂಟಿ ಗೌರವಾನ್ವಿತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, 10000 ಎಸೆತ ಕೇವಲ 191 ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಕಬಳಿಸಿದ್ದ ನಾಡಕರ್ಣಿ  14 ಶತಕ ಮತ್ತು 46 ಅರ್ಧಶತಕಗಳೊಂದಿಗೆ 8880 ಪ್ರಥಮ ದರ್ಜೆ ರನ್ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.