ಯುವ ಎಡಗೈ ಬ್ಯಾಟ್ಸ್‌ಮನ್ ಮಂಜೋತ್ ಕಲ್ರಾ ಒಂದು ವರ್ಷ ಅಮಾನತು!
16 ಹಾಗೂ 19 ವಯೋಮಿತಿ ಅವಧಿಯಲ್ಲಿ ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದ ದೆಹಲಿಯ ಯುವ ಎಡಗೈ ಬ್ಯಾಟ್ಸ್‌ಮನ್ ಮಂಜೋತ್ ಕಲ್ರಾ ಅವರನ್ನು ಒಂದು ವರ್ಷ ಡಿಡಿಸಿಎ ಒಂಬುಡ್ಸ್‌ಮನ್ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಇವರು ಕಳೆದ ಆವೃತ್ತಿಯ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದರು.

ನವದೆಹಲಿ: 16 ಹಾಗೂ 19 ವಯೋಮಿತಿ ಅವಧಿಯಲ್ಲಿ ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದ ದೆಹಲಿಯ ಯುವ ಎಡಗೈ ಬ್ಯಾಟ್ಸ್‌ಮನ್ ಮಂಜೋತ್ ಕಲ್ರಾ ಅವರನ್ನು ಒಂದು ವರ್ಷ ಡಿಡಿಸಿಎ ಒಂಬುಡ್ಸ್‌ಮನ್ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಇವರು ಕಳೆದ ಆವೃತ್ತಿಯ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದರು.
ಇದೇ ರೀತಿ ದೆಹಲಿಯ ಹಿರಿಯದ ತಂಡದ ಉಪ ನಾಯಕ ನಿತೀಶ್ ರಾಣಾ ಅವರು ಕೂಡ ಕಿರಿಯರ ಹಂತದಲ್ಲಿ ಜನನ ಸಂಬಂದ ಸುಳ್ಳು ಪ್ರಮಾಣ ಪತ್ರ ನೀಡಿ ಸಿಕ್ಕಿ ಹಾಕಿಕೊಂಡಿದ್ದರು.
ಮಂಜೋತ್ ಕಲ್ರಾ ಅವರು ವಯಸ್ಸು ಬಿಸಿಸಿಐನಲ್ಲಿ 20 ವರ್ಷ 351 ದಿನಗಳು ತೋರಿಸುತ್ತಿದೆ. ಇವರು ದೆಹಲಿ 23 ವಯೋಮಿತಿ ತಂಡದ ಪರ ಬಂಗಾಳ ವಿರುದ್ಧ 80 ರನ್ ಗಳಿಸಿದ್ದರು. ಅಲ್ಲದೇ, ರಣಜಿ ಟ್ರೋಫಿಯಲ್ಲಿ ಶಿಖರ್ ಧವನ್ ಜತೆ ಆರಂಭಿಕನಾಗಿ ಆಡಿದ್ದರು. ಆದರೆ, ಇದೀಗ ಒಂದು ವರ್ಷ ಅಮಾನತು ಶಿಕ್ಷಗೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


