ಕ್ರಿಕೆಟ್

ಟ್ರಂಪ್ ಉದ್ಘಾಟಿಸಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಆಗಸದಿಂದ ಕಾಣಿಸಿದ್ದು ಹೀಗೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.

ಟ್ರಂಪ್ ಉದ್ಘಾಟಿಸಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಆಗಸದಿಂದ ಕಾಣಿಸಿದ್ದು ಹೀಗೆ!
ಮೊಟೆರಾ ಕ್ರೀಡಾಂಗಣ
Published On :

ಮೊಟೆರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಗುಜರಾತ್ ನ ಅಹಮದಾಬಾದ್ ನಲ್ಲಿರುವ ಜಗತ್ತಿನ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. 

ಫೆಬ್ರವರಿ 24ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿದ್ದು ವಿಶ್ವದ ಬೃಹತ್ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೌಡಿ ಮೋದಿಗೆ ಸಮಾನವಾಗಿ ಮೊಟೆರಾ ಸ್ಟೇಡಿಯಂನಲ್ಲಿ ಕೆಮ್ ಚೊ ಟ್ರಂಪ್ ಕಾರ್ಯಕ್ರಮ ಆಯೋಜನೆಯಾಗಲಿದೆ. ಇನ್ನು ಕ್ರೀಡಾಂಗಣದ ಆಗಸದಿಂದ ಹಿಡಿದಿದ್ದ ಚಿತ್ರವೊಂದನ್ನು ಬಿಸಿಸಿಐ ಟ್ವೀಟ್ ಮಾಡಿತ್ತು.

ಮೊಟೆರಾ ಕ್ರೀಡಾಂಗಣದ ವಿಶೇಷತೆಗಳೇನು!
ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ 1.10 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿದೆ. ಇನ್ನು ಆಸ್ಟ್ರೇಲಿಯಾ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯ ಅನ್ನು ಮೊರೆಟಾ ಹಿಂದಿಕ್ಕಲಿದೆ. ಆಸ್ಟ್ರೇಲಿಯಾದ ಎಂಸಿಜೆ ಮೈದಾನದಲ್ಲಿ 90 ಸಾವಿರ ಮಂದಿ ಆಸನಗಳಿವೆ. ಸುಸ್ಸಜ್ಜಿತ ಕ್ರೀಡಾಗಂಣ, ಅಭ್ಯಾಸ ಮೈದಾನ, ಅಭ್ಯಾಸ ಪಿಚ್, ಒಳಾಂಗಣ ಕ್ರಿಕೆಟ್ ಅಕಾಡೆಮಿ, ಒಲಿಂಪಿಕ್ಸ್ ಗೆ ಸಮಾನವಾದ ಈಜುಕೊಳ, ಸ್ಕ್ವಾಷ್ ಕೋರ್ಟ್, ಟೆನಿಸ್ ಕೋರ್ಟ್, ಟೇಬಲ್ ಟೆನಿಸ್ ಕೋರ್ಟ್, 3ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲ ಥಿಯೇಟರ್, ಎಲ್ಇಡಿ ಲೈಟಿಂಗ್ ವ್ಯವಸ್ಥೆ.

ಜಗತ್ತಿನ ಎರಡನೇ ದೊಡ್ಡ ಕ್ರೀಡಾಂಗಣ
ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊಟೆರಾ ಜಗತ್ತಿನ ಅತೀ ದೊಡ್ಡ ಕ್ರೀಡಾಂಗಣವಾಗಲಿದೆ. ಇನ್ನು ಕೊರೆಯಾದಲ್ಲಿರುವ ರುಂಗ್ರಾಡೊ ಮೆ ಡೆ ಕ್ರೀಡಾಂಗಣ ಸದ್ಯ ಅತೀ ದೊಡ್ಡ ಕ್ರೀಡಾಂಗಣವಾಗಿದ್ದು ಇದರಲ್ಲಿ ಒಂದೂವರೆ ಲಕ್ಷ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.