ಕ್ರಿಕೆಟ್

ಉದ್ದೇಶಪೂರ್ವಕವಾಗಿ 'ಬೀಮರ್‌' ಹಾಕಿದ್ದೆ': ಧೋನಿ ಕ್ಷಮೆ ಕೋರಿದ ಘಟನೆ ನೆನೆದ ಅಖ್ತರ್

ಫೈಸಲಾಬಾದ್‌ನಲ್ಲಿ ಭಾರತ ವಿರುದ್ಧದ 2006ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ಎಂಎಸ್ ಧೋನಿಗೆ ಉದ್ದೇಶಪೂರ್ವಕವಾಗಿ ಬೀಮರ್ ಹಾಕಿದ್ದ ಬಗ್ಗೆ ವಿಷಾದಿಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಒಪ್ಪಿಕೊಂಡಿದ್ದಾರೆ.

ಉದ್ದೇಶಪೂರ್ವಕವಾಗಿ 'ಬೀಮರ್‌' ಹಾಕಿದ್ದೆ': ಧೋನಿ ಕ್ಷಮೆ ಕೋರಿದ ಘಟನೆ ನೆನೆದ ಅಖ್ತರ್
ಎಂಎಸ್ ಧೋನಿ-ಶೋಯೆಬ್ ಅಖ್ತರ್
Published On :

ನವದೆಹಲಿ: ಫೈಸಲಾಬಾದ್‌ನಲ್ಲಿ ಭಾರತ ವಿರುದ್ಧದ 2006ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ಎಂಎಸ್ ಧೋನಿಗೆ ಉದ್ದೇಶಪೂರ್ವಕವಾಗಿ ಬೀಮರ್ ಹಾಕಿದ್ದ ಬಗ್ಗೆ ವಿಷಾದಿಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಒಪ್ಪಿಕೊಂಡಿದ್ದಾರೆ. 

ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಧೋನಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ್ದರು. ಶೊಯೆಬ್‌ ಅಖ್ತರ್‌ ಬೌಲಿಂಗ್‌ನಲ್ಲಿ ಧೋನಿ ಮೂರು ಬೌಂಡರಿ ಬಾರಿಸಿದ್ದರು. 

ಇದಾದ ಬಳಿಕ, ರೌಂಡ್‌ ದಿ ವಿಕೆಟ್‌ ಪಡೆದ ಮಾಜಿ ವೇಗಿ, ಭಾರತೀಯ ವಿಕೆಟ್‌ ಕೀಪರ್‌ಗೆ ಬೀಮರ್‌ ಹಾಕಿದರು. 14 ವರ್ಷಗಳ ನಂತರ, ಅಖ್ತರ್ ಅವರು ಧೋನಿಗೆ ಹತಾಶೆಯಿಂದ ಬೀಮರ್ ಅನ್ನು ಉದ್ದೇಶಪೂರ್ವಕವಾಗಿ ಬೌಲ್ ಮಾಡಿರುವುದಾಗಿ ಎಂದು ಒಪ್ಪಿಕೊಂಡರು.

"ಫೈಸಲಾಬಾದ್‌ನಲ್ಲಿ 8 ರಿಂದ 9 ಓವರ್‌ ಬೌಲಿಂಗ್‌ ಮಾಡಿರಬಹುದು ಎಂದು ಭಾವಿಸಿದ್ದೇನೆ. ನನ್ನದು ತ್ವರಿತಗತಿಯ ಸ್ಪೆಲ್‌ ಆಗಿತ್ತು ಹಾಗೂ ಎಂಎಸ್‌ ಧೋನಿ ಶತಕ ಗಳಿಸಿದ್ದರು. ಅಂದು ಹತಾಶೆಗೆ ಒಳಗಾಗಿದ್ದ ನಾನು ಉದ್ದೇಶ ಪೂರ್ವಕವಾಗಿ ಧೋನಿಗೆ ಬೀಮರ್‌ ಹಾಕಿದ್ದೆ, ನಂತರ ಅವರ ಬಳಿ ಕ್ಷಮೆ ಕೋರಿದ್ದೆ," ಎಂದು ಆಕಾಶ್‌ ಚೋಪ್ರಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡುವಾಗ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.