ಲಾರಾಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರ್ ಅವರಿಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ನವದೆಹಲಿ: ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರ್ ಅವರಿಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಲವು ವರ್ಷಗಳ ಕಾಲ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದ ಪಾಕಿಸ್ತಾನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ತಮ್ಮ ಬ್ಯಾಟಿಂಗ್‌ಗಿಂತಲೂ ಬೌಲಿಂಗ್ ಮೂಲಕವೇ ಪಾಕ್‌ಗೆ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಲೆಗ್ ಸ್ಪಿನ್ನರ್ ಆದರೂ ಚೆಂಡಿನಲ್ಲಿ ಹೆಚ್ಚು ತಿರುವು ತರದ ಅಫ್ರಿದಿ ಗತಿಯಲ್ಲಿ ಬದಲಾವಣೆ ತಂದು ಹೆಚ್ಚು ವೇಗವಾಗಿ ಬೌಲ್ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗುತ್ತಿದ್ದರು. ಅಂದಹಾಗೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಎದುರು ಆತ್ಮವಿಶ್ವಾಸದಿಂದಲೇ ಬೌಲಿಂಗ್ ಮಾಡುತ್ತಿದ್ದ ಅಫ್ರಿದಿ, ತಮ್ಮ ವೃತ್ತಿ ಬದುಕಿನಲ್ಲಿ ಒಬ್ಬ ಬ್ಯಾಟ್ಸ್‌ಮನ್ ಎದುರು ಮಾತ್ರ ಬೌಲಿಂಗ್ ಮಾಡಲು ಹೆದರುತ್ತಿದ್ದರಂತೆ.
ಹೌದು..ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಎದುರು ಬೌಲಿಂಗ್ ಮಾಡಲು ಸದಾ ಹೆದರುತ್ತಿದ್ದುದ್ದಾಗಿ ವಿಸ್ಡನ್ ಕ್ರಿಕೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಅಫ್ರಿದಿ ಹೇಳಿದ್ದಾರೆ.
"ನಾನು ಬೌಲಿಂಗ್ ಮಾಡಲು ಹೆದರುತ್ತಿದ್ದ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ. ಅವರನ್ನು ಕೆಲ ಬಾರಿ ಔಟ್ ಮಾಡಿದ್ದೇನೆ ನಿಜ. ಆದರೆ ಅವರಿಗೆ ಬೌಲಿಂಗ್ ಮಾಡುವಾಗ ಸದಾ ಹೆದರುತ್ತಿದ್ದೆ. ನನ್ನ ಮುಂದಿನ ಎಸೆತದಲ್ಲಿ ಅವರು ಬೌಂಡರಿ ಬಾರಿಸುತ್ತಾರೆ ಎಂಬ ಭಯ ಸದಾ ಕಾಡುತ್ತಿತ್ತು. ನನ್ನ ಮೇಲೆ ಅವರು ಅಷ್ಟು ಪ್ರಭಾವ ಬೀರಿದ್ದರು. ಅವರೆದುರು ನಾನು ಎಂದೂ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಿಲ್ಲ," ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


