ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಪೀಟರ್ ವಾಕರ್ ನಿಧನ
1960ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಪೀಟರ್ ವಾಕರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಲಂಡನ್: 1960ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ನ ಮಾಜಿ ಆಲ್ ರೌಂಡರ್ ಪೀಟರ್ ವಾಕರ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಪಾರ್ಶ್ವವಾಯುವಿನಿಂದ ಪೀಟರ್ ಮೃತಪಟ್ಟಿದ್ದಾರೆ ಎಂದು ಬಿಬಿಸಿ ಸ್ಪೋಟ್ಸ್ ವರದಿ ಮಾಡಿದೆ.ಅಂತಾರಾಷ್ಟ್ರೀಯ ವೃತ್ತಿ ಬದುಕಿನಲ್ಲಿ ಗರಿಷ್ಠ 52 ರನ್ ಸೇರಿದಂತೆ ಪೀಟರ್ 128 ರನ್ ಗಳಿಸಿದ್ದಾರೆ.
ಗ್ಲಮೊರ್ಗನ್ ತಂಡದೊಂದಿಗೆ 16 ವರ್ಷ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಈ ಸಮಯದ ಅವರು 469 ಪಂದ್ಯಗಳಲ್ಲಿ 13 ಶತಕ, 92 ಅರ್ಧ ಶತಕ ಬಾರಿಸಿದ್ದಾರೆ. ಜತೆಗೆ 25 ಬಾರಿ ಐದು ವಿಕೆಟ್ ಗೊಂಚಲು ಸೇರಿದಂತೆ 834 ವಿಕೆಟ್ ಕಬಳಿಸಿದ್ದಾರೆ. ಆರಂಭದಲ್ಲಿ ಎಡಗೈ ಮಧ್ಯಮ ವೇಗಿಯಾಗಿ ಕಾಣಿಸಿಕೊಂಡ ಪೀಟರ್ ವೃತ್ತಿ ಬದುಕಿನ ಮಧ್ಯಂತರದಲ್ಲಿ ಎಡಗೈ ಸ್ಪಿನ್ ಬೌಲರ್ ಆಗಿ ಪರಿವರ್ತನೆಗೊಂಡಿದ್ದರು. ಪೀಟರ್ ನಿಧನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


