ವಿಜಯ್ ಹಜಾರೆ ಫೈನಲ್ : ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಸಾಧನೆ!
ವಿಜಯ್ ಹರಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಬಲಗೈ ವೇಗಿ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ.

ಬೆಂಗಳೂರು: ವಿಜಯ್ ಹರಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಬಲಗೈ ವೇಗಿ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ತಮಿಳುನಾಡು ಹಾಗೂ ಕರ್ನಾಟಕ ನಡುವಣ ಫೈನಲ್ ಪಂದ್ಯದಲ್ಲಿ ತಮ್ಮ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಿಥುನ್ ಈ ಸಾಧನೆ ಮಾಡಿದ್ದಾರೆ.
ತಮಿಳುನಾಡು ಇನ್ನಿಂಗ್ಸ್ ನಲ್ಲಿ ಶಾರೂಖ್ ಖಾನ್ (27) ಎಂ, ಮೊಹಮ್ಮದ್ ( 10) ಹಾಗೂ ಮುರುಗನ್ ಅಶ್ವಿನ್ ಅವರನ್ನು ಶೂನ್ಯ ರನ್ ಗಳಿಗೆ ಮಿಥುನ್ ಔಟ್ ಮಾಡಿದ್ದಾರೆ.
50ನೇ ಓವರ್ ನಲ್ಲಿ ಶಾರೂಖ್ ಖಾನ್, ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ನಂತರ ಬಂದ ಮೊಹಮ್ಮದ್ ಅವರನ್ನು ದೇವದತ್ತ ಪಡಿಕ್ಕ ಕ್ಯಾಚ್ ಪಡೆದರು. ಅವರ ನಂತರ ಬಂದ ಮುರುಗನ್ ಅವರನ್ನು ಕೃಷ್ಣಪ್ಪ ಗೌತಮ್ ಕ್ಯಾಚ್ ಹಿಡಿದರು. ಇದರೊಂದಿಗೆ ತಮಿಳುನಾಡು 252 ರನ್ ಗಳನ್ನು ಗಳಿಸಿತು.
ಅಭಿಮನ್ಯು ಮಿಥುನ್ ಗಿಂತ ಮುಂಚೆ ಬೌಲಿಂಗ್ ಮಾಡಿದ ಮುರಳಿ ವಿಜಯ್ ಮೊದಲ ಓವರ್ ನಲ್ಲಿಯೇ ಒಬ್ಬರನ್ನು ಡಕ್ ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಉತ್ತಮ ಆರಂಭ ನೀಡಿದರು. 46ನೇ ಓವರ್ ನಲ್ಲಿ ಮತ್ತೊಂದು ವಿಕೆಟ್ ಪಡೆದುಕೊಂಡರು. ಕರುಣ್ ನಾಯರ್ ವಿಜಯ್ ಶಂಕರ್ ಅವರ ಕ್ಯಾಚ್ ಪಡೆದರು.
ಅಭಿಮನ್ಯು ಮಿಥುನ್ 34 ರನ್ ಗಳಿಗೆ 5 ವಿಕೆಟ್ ಪಡೆಯುವ ಮೂಲಕ ಎ ದರ್ಜೆಯ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಆಟಗಾರರ ಪಟ್ಟಿ ಸೇರಿದರು. ವಿಜಯ್ ಹರಾರೆ ಟ್ರೋಫಿ ಫೈನಲ್ ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


