ವಿಜಯ ಹಜಾರೆ ಟ್ರೋಫಿ: ಚತ್ತೀಸ್ ಗಢ ವಿರುದ್ಧ ಭರ್ಜರಿ ಗೆಲುವಿನೊಡನೆ ಕರ್ನಾಟಕ ಫೈನಲ್ ಗೆ ಲಗ್ಗೆ
ಯುವ ಆಟಗಾರ ವಿ.ಕೌಶಿಕ್ (46 ಕ್ಕೆ 4) ಹಾಗೂ ದೇವದತ್ ಪಡೀಕ್ಕಲ್ (92) ಇವರುಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ವಿಜಯ ಹಜಾರೆ ಏಕದಿನ ಸರಣಿಯ ಸೆಮಿಫೈನಲ್ಸ್ ನಲ್ಲಿ 9 ವಿಕೆಟ್ ಗಳಿಂದ ಚತ್ತೀಸ್ ಗಢ ತಂಡವನ್ನು ಮಣಿಸಿ, ಪ್ರಶಸ್ತಿ ಸುತ್ತು ಪ್ರವೇಶಿಸಿದೆ.

ಬೆಂಗಳೂರು: ಯುವ ಆಟಗಾರ ವಿ.ಕೌಶಿಕ್ (46 ಕ್ಕೆ 4) ಹಾಗೂ ದೇವದತ್ ಪಡೀಕ್ಕಲ್ (92) ಇವರುಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಕರ್ನಾಟಕ ವಿಜಯ ಹಜಾರೆ ಏಕದಿನ ಸರಣಿಯ ಸೆಮಿಫೈನಲ್ಸ್ ನಲ್ಲಿ 9 ವಿಕೆಟ್ ಗಳಿಂದ ಚತ್ತೀಸ್ ಗಢ ತಂಡವನ್ನು ಮಣಿಸಿ, ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಚತ್ತೀಸ್ ಗಢ 49.4 ಓವರ್ ಗಳಲ್ಲಿ 223 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 40 ಓವರ್ ಗಳಲ್ಲಿ 1 ವಿಕೆಟ್ ಗೆ 229 ರನ್ ಕಲೆ ಹಾಕಿ, ಫೈನಲ್ ಗೆ ಲಗ್ಗೆ ಇಟ್ಟಿತು.
ಚತ್ತೀಸ್ ಗಢ ತಂಡದ ಆರಂಭಿಕರಾದ ಜೀವಜಂತ್ ಸಿಂಗ್ (6) ಹಾಗೂ ಶಶಾಂಕ್ ಸಿಂಗ್ (0) ಕರ್ನಾಟಕದ ಸ್ಟಾರ್ ಬೌಲರ್ ಗಳನ್ನು ಎದುರಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಆಶುತೋಷ್ ಸಿಂಗ್ (20) ಹಾಗೂ ಹರ್ಪಿತ್ ಸಿಂಗ್ (25) ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ.
ಮಧ್ಯಮಕ್ರಮಾಂಕದಲ್ಲಿ ಅಮನ್ ದೀಪ್ ಖರೆ 102 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 78 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ರನ್ ಸಿಡಿಸುವಲ್ಲಿ ವಿಫಲರಾದರು. ಸುಮಿತ್ ರಾಯ್ಕರ್ 37 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಕರ್ನಾಟಕದ ಪರ ವಿ.ಕೌಶಿಕ್ 46 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಉಳಿದಂತೆ ಅಭಿಮನ್ಯು ಮಿಥುನ್, ಕೆ.ಗೌತಮ್, ಪ್ರವೀಣ್ ದುಬೆ ತಲಾ ಎರಡು ವಿಕೆಟ್ ಕಿತ್ತರು.
ಕರ್ನಾಟಕದ ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ದೇವದತ್ ಪಡೀಕ್ಕಲ್ ಅವರು ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 30.5 ಓವರ್ ಗಳಲ್ಲಿ 155 ರನ್ ಗಳ ಜೊತೆಯಾಟ ಜೋಡಿಸಿತು. ದೇವದತ್ ಪಡೀಕ್ಕಲ್ 98 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 92 ರನ್ ಸೇರಿಸಿ ಔಟ್ ಆದರು.
ಕೆ.ಎಲ್ ರಾಹುಲ್ 111 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 88 ರನ್ ಬಾರಿಸಿ ಅಜೇಯರಾಗುಳಿದರು. ಮಯಾಂಕ್ ಅಗರ್ ವಾಲ್ 33 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 47 ರನ್ ಸೇರಿಸಿ ಔಟ್ ಆಗದೇ ಉಳಿದರು.
ಸಂಕ್ಷಿಪ್ತ ಸ್ಕೋರ್
ಚತ್ತೀಸ್ ಗಢ 49.4 ಓವರ್ ಗಳಲ್ಲಿ 223
ಕರ್ನಾಟಕ 40 ಓವರ್ ಗಳಲ್ಲಿ ಒಂದು ವಿಕೆಟ್ ಗೆ 229
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


