ಕ್ರಿಕೆಟ್

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ನಿನ್ನೆ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!
ಕಾಗಿಸೋ ರಬಾಡ-ಕೊಹ್ಲಿ
Published On :

ಪುಣೆ: ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ನಿನ್ನೆ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ. 

ಅರ್ಧ ಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ ಅವರನ್ನು ಔಟ್ ಮಾಡಿದ ರಬಾಡ ಸಂಭ್ರಮಾಚರಣೆ ಮಾಡುತ್ತಾ ಪೂಜಾರ ಬಳಿ ಬಂದು ಅಸಭ್ಯವಾದ ಶಬ್ದ ಬಳಕೆ ಮಾಡಿದ್ದರು. ಇದನ್ನು ತಿಳಿದ ಕೊಹ್ಲಿ ಮಾರನೇ ದಿನ ರಬಾಡ ಓವರ್ ಥ್ರೋ ಎಸೆದಾಗ ಮೈದಾನದಲ್ಲೇ ಹೆಬ್ಬೆರಳನ್ನು ತೋರಿಸಿ ಅಣಕಿಸಿದರು. 

ಸಿಂಗಲ್ ರನ್ ಕೊಡುವ ಜಾಗದಲ್ಲಿ ರಬಾಡ ಎಸೆದ ಓವರ್ ಥ್ರೋ ಬೌಂಡರಿ ಗೆರೆ ಮುಟ್ಟಿತ್ತು. ಇದರಿಂದ ಸಂತುಷ್ಟನಾದ ಕೊಹ್ಲಿ ತಮ್ಮ ಹೆಬ್ಬೆರಳನ್ನು ತೋರಿಸುತ್ತಾ ಕೊಹ್ಲಿ ನಕ್ಕಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.