ಕ್ರಿಕೆಟ್

ಪಾಕ್ ಕ್ರಿಕೆಟಿಗರ ಮತ್ತೊಂದು ಹಾಸ್ಯಾತ್ಮಕ ರನೌಟ್: ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ ವೈರಲ್!

ವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಸೋತು ಸರಣಿ ಸೋಲು ಕಂಡಿದೆ. ಈ ಮಧ್ಯೆ ಪಾಕ್ ಬ್ಯಾಟ್ಸ್ ಮನ್ ಗಳ ಹಾಸ್ಯಾತ್ಮಕ ರನೌಟ್ ನೋಡಿದ ನೆಟಿಗರು ಪಾಕ್ ನಾಯಕ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಪಾಕ್ ಕ್ರಿಕೆಟಿಗರ ಮತ್ತೊಂದು ಹಾಸ್ಯಾತ್ಮಕ ರನೌಟ್: ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ ವೈರಲ್!
ಪಾಕ್ ಕ್ರಿಕೆಟಿಗರು
Published On :

ಲಾಹೋರ್: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಸೋತು ಸರಣಿ ಸೋಲು ಕಂಡಿದೆ. ಈ ಮಧ್ಯೆ ಪಾಕ್ ಬ್ಯಾಟ್ಸ್ ಮನ್ ಗಳ ಹಾಸ್ಯಾತ್ಮಕ ರನೌಟ್ ನೋಡಿದ ನೆಟಿಗರು ಪಾಕ್ ನಾಯಕ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಮೊದಲ ಟಿ20 ಪಂದ್ಯದ ಈ ಹಾಸ್ಯಾತ್ಮಕ ರನೌಟ್ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ನೆಟಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡಿ ಪಾಕಿಗಳ ಕಾಲೆಳೆಯುತ್ತಿದ್ದಾರೆ. 

ಲಂಕಾ ಬೌಲರ್ ಇಸುರು ಉದಾನ ಬೌಲಿಂಗ್ ಇಫ್ತಿಕರ್ ಅಹ್ಮದ್ ಆಫ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ಹಿಡಿದು ಬೌಲರ್ ಕೈಗೆ ಎಸೆದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ರನ್ ಪಡೆಯುವ ಆತುರದಲ್ಲಿ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ರನ್ ಬೇಡ ಎಂದು ಕೂಗುತ್ತಿದ್ದರು ಓಡಿದರು ಪರಿಣಾಮ ಇಫ್ತಿಕರ್ ರನೌಟ್ ಗೆ ಬಲಿಯಾಗಬೇಕಾಯಿತು. 

ಒಟ್ಟಿನಲ್ಲಿ ಸಮನ್ವಯದ ಕೊರತೆಯಿಂದ ಪಾಕ್ ಕ್ರಿಕೆಟಿಗರು ಸಾಕಷ್ಟು ಸಲ ಈ ರೀತಿ ರನೌಟ್ ಆಗಿ ಹಾಸ್ಯಾಸ್ಪದಕ್ಕೆ ಸಿಲುಕುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.