ಕೀಪರ್ ಆಗಿ ದೊಡ್ಡ ಬ್ಲಂಡರ್ ಮಾಡಿದ ರಿಷಬ್ ಪಂತ್, ಕಾಲೆಳೆದ ನೆಟಿಗರು, ವಿಡಿಯೋ ವೈರಲ್!
ಕೀಪರ್ ಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲದಂತೆ ಟೀಂ ಇಂಡಿಯಾದ ಯುವ ವೇಗಿ ರಿಷಬ್ ಪಂತ್ ದೊಡ್ಡ ಬ್ಲಂಡರ್ ವೊಂದನ್ನು ಮಾಡಿದ್ದು ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.Wicket keeper

ರಾಜ್ ಕೋಟ್: ಕೀಪರ್ ಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲದಂತೆ ಟೀಂ ಇಂಡಿಯಾದ ಯುವ ವೇಗಿ ರಿಷಬ್ ಪಂತ್ ದೊಡ್ಡ ಬ್ಲಂಡರ್ ವೊಂದನ್ನು ಮಾಡಿದ್ದು ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಬಾಂಗ್ಲಾದೇಶದ ಲಿಟನ್ ದಾಸ್ ರನ್ನು ಸ್ಟಂಪ್ ಔಟ್ ಮಾಡಿದ್ದರು. ಆದರೆ ಅಂಪೈರ್ ಗಳಿಗೆ ಕೊಂಚ ಅನುಮಾನ ಬಂದಿದ್ದರಿಂದ ತೀರ್ಪನ್ನು ಕಾಯ್ದಿರಿಸಿ, ರಿವ್ಯೂ ನೋಡಿದಾಗ ಪಂತ್ ವಿಕೆಟ್ ಗೂ ಮುಂದೆ ಚೆಂಡನ್ನು ಹಿಡಿದಿರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು.
ಆತುರದಲ್ಲಿ ರಿಷಬ್ ಪಂತ್ ವಿಕೆಟ್ ಗೂ ಮುಂದೆ ಚೆಂಡನ್ನು ಹಿಡಿದಿದ್ದರು. ಇದನ್ನು ನೋಡಿದ ಯಜುವೇಂದ್ರ ಚಹಾಲ್ ಮತ್ತು ರೋಹಿತ್ ಶರ್ಮಾ ಬೇಸರಗೊಂಡಿದ್ದರು ಕಾರಣ ನಂತರ ಎರಡು ಎಸೆತದಲ್ಲಿ ಲಿಟನ್ ದಾಸ್ ಎರಡು ಬೌಂಡರಿ ಸಿಡಿಸಿದ್ದರು.
ಇನ್ನು ರಿಷಬ್ ಪಂತ್ ರ ವಿರುದ್ಧ ಆಕ್ರೋಶಗೊಂಡಿರುವ ನೆಟಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಕಾಲೆಳೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


