ಮೈದಾನದಲ್ಲೇ ಕೀರಾನ್ ಪೊಲಾರ್ಡ್ ದೊಂಬರಾಟ, ಅಂಪೈರ್‌ಗಳು ಗರಂ, ವಿಡಿಯೋ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ...

Published On :
ಹೈದರಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಪಂದ್ಯದ ನಡುವೆ ಕೀರಾನ್ ಪೊಲಾರ್ಡ್ ಮೈದಾನದಲ್ಲೇ ದೊಂಬರಾಟವಾಡಿದ್ದು ಇದಕ್ಕೆ ಅಂಪೈರ್ ಗಳು ಗರಂ ಆದ ಪ್ರಸಂಗ ನಡೆದಿದೆ.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ 19 ಓವರ್ ನ 3 ಎಸೆತವನ್ನು ಡ್ವೈನ್ ಬ್ರಾವೋ ವೈಡ್ ಗೆರೆಯಿಂದ ಆಚೆಗೆ ಎಸೆದರು. ಈ ವೇಳೆ ಪೊಲಾರ್ಡ್ ವಿಕೆಟ್ ನಿಂದ ಮುಂದೆ ಬಂದಿದ್ದರಿಂದ ಅಂಪೈರ್ ವೈಡ್ ಕೊಡಲಿಲ್ಲ. ಇದರಿಂದ ಬೇರಸಗೊಂಡ ಪೊಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದಾದ ನಂತರದ ಎಸೆತದಲ್ಲಿ ಪೊಲಾರ್ಡ್ ವಿಕೆಟ್ ಬಿಟ್ಟು ಮುಂದೆ ಬಂದಿದ್ದರು. ಈ ವೇಳೆ ಈ ವೇಳೆ ಬ್ರಾವೋ ಬೌಲಿಂಗ್ ಮಾಡುವುದಕ್ಕೂ ಮುಂಚೆ ಕ್ರಿಸ್ ಬಿಟ್ಟು ಹೊರಹೋದರು ಇದರಿಂದ ಬ್ರಾವೋ ಬೌಲಿಂಗ್ ಮಾಡಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಪೈರ್ ಗಳಿಬ್ಬರು ಪೊಲಾರ್ಡ್ ಗೆ ಎಚ್ಚರಿಕೆಯನ್ನು ನೀಡಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
WATCH: What's up with Pollard?
Full video here
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kieron PollardMumbai Indiansಮುಂಬೈ ಇಂಡಿಯನ್ಸ್Cricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019ಕೀರಾನ್ ಪೊಲಾರ್ಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


