ಸ್ಪಿನ್ ಬೌಲರ್‌ಗಳಿಗೆ ಸೂರ್ಯಕುಮಾರ್ ಸಿಂಹಸ್ವಪ್ನ: ರೋ'ಹಿಟ್' ಶರ್ಮಾ
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫಿಯರ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕ...

Published On :
ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫಿಯರ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೆ 6 ವಿಕೆಟ್‌ಗಳಿಂದ ಗೆಲುವು ಪಡೆದು ಐಪಿಎಲ್ ಫೈನಲ್ ತಲುಪಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 54 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, " ಸ್ಪಿನ್ ಬೌಲಿಂಗ್‌ಗೆ ಸೂರ್ಯಕುಮಾರ್ ಯಾದವ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಅವರನ್ನು ಬಹಳ ಹತ್ತಿರದಿಂದ ವೀಕ್ಷಿಸಿದ್ದು, ಸ್ಪಿನ್ ಬೌಲಿಂಗ್ ಅನ್ನು ಅವರು ಉತ್ತಮವಾಗಿ ಎದುರಿಸುತ್ತಾರೆ. ಕೆಲವೊಂದು ಶಾಟ್‌ಗಳನ್ನು ಅವರು ವಿಕೆಟ್ ಹಿಂದೆ ಆಡುತ್ತಾರೆ. ಈ ರೀತಿ ಆಡುವುದು ಸುಲಭವಲ್ಲ" ಎಂದು ಮುಂಬೈ ಬ್ಯಾಟ್ಸ್‌ಮನ್‌ಗೆ ಬೆನ್ನು ತಟ್ಟಿದರು.
"ಚೆನ್ನೈ ಪಿಚ್‌ನಲ್ಲಿ ಚೆಂಡು ನಿಧಾನಗತಿಯಲ್ಲಿ ತಿರುಗುವ ಹಿನ್ನೆಲೆಯಲ್ಲಿ ಅಗ್ರ ಮೂರು ಅಥವಾ ನಾಲ್ಕನೇ ಕ್ರಮಾಂಕದ ಆಟಗಾರರಲ್ಲಿ ಒಬ್ಬರು ಪಂದ್ಯದ ಕೊನೆಯ ಹಂತದವರೆಗೂ ಆಡುವುದು ಕಷ್ಟದ ಕೆಲಸ. ಗಾಳಿಯಲ್ಲಿ ಚೆಂಡನ್ನು ಹಾರಿಸುವುದು ಕಷ್ಟವೆಂದು ಮೊದಲನೇ ಇನಿಂಗ್ಸ್‌ನಲ್ಲೇ ಅರಿವಾಯಿತು" ಎಂದರು.
"ಇಂಥ ಸನ್ನಿವೇಶದಲ್ಲಿ ಒಂದು ಅಥವಾ ಎರಡು ರನ್‌ಗಳಿಗೆ ಮೈದಾನದಲ್ಲಿ ಚೆಂಡು ಉರುಳಿಸಿ ರನ್ ಕದಿಯುವ ಅನಿವಾರ್ಯತೆ ಉಂಟಾಗುತ್ತದೆ. ಹಾಗಾಗಿ, ಮೊದಲ ಇನಿಂಗ್ಸ್ ಬಳಿಕ ಒಬ್ಬ ಸಹ ಆಟಗಾರನ ಜತೆ ಮಾತನಾಡಿದ್ದು, ಅಗ್ರ ಕ್ರಮಾಂಕದ ಆಟಗಾರನೊಬ್ಬ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಆಡುವುದು ಅಗತ್ಯವಿದೆ. ಏಕೆಂದರೆ, ತಡವಾಗಿ ಕ್ರೀಸ್‌ಗೆ ಬಂದ ಬ್ಯಾಟ್ಸ್‌ಮನ್ ಕ್ಲಿಕ್ ಆಗುವುದು ಕಷ್ಟ" ಎಂದು ತಿಳಿಸಿದರು.
"ಎಂ.ಎಸ್ ಧೋನಿ ಅವರು ಸುಲಭವಾಗಿ ಸೋಲು ಒಪ್ಪಿಕೊಳ್ಳುವವರಲ್ಲ. ಎಷ್ಟೇ ಕಡಿಮೆ ಮೊತ್ತವಿದ್ದರೂ ಗೆಲುವಿಗಾಗಿ ಕೊನೆಯ ಎಸೆತದವರೆಗೂ ಅವರು ಹೋರಾಟ ನಡೆಸುತ್ತಾರೆ. ಹಾಗಾಗಿ, ಇದನ್ನೂ ನಾವು ಮೊದಲೇ ಲೆಕ್ಕಚಾರ ಹಾಕಿದ್ದೆವು. ಸಿಎಸ್‌ಕೆ ತಂಡವನ್ನು 140 ರನ್‌ಗಳಿಗೂ ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಬೌಲರ್‌ಗಳ ಪಾತ್ರ ಅತ್ಯಂತ ವಿಶೇಷವಾದದ್ದು ಎಂದು ಹೊಗಳಿದರು.
ಅಂತಿಮ 11 ರಲ್ಲಿ ಜಯಂತ್ ಯಾದವ್ ಅವರಿಗೆ ಸ್ಥಾನ ನೀಡಿದ್ದನ್ನು ಸಮರ್ಥಿಸಿಕೊಂಡ ಅವರು, ಜಯಂತ್ ಯಾದವ್ ಗುಣಮಟ್ಟದ ಬೌಲರ್. ಚೆನ್ನೈ ತಂಡದ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಇವರ ಬೆರಳುಗಳಿಂದ ಮಾಡುವ ಸ್ಪಿನ್ ಪರಿಣಾಮಕಾರಿಯಾಗುತ್ತದೆ. ಹಾಗಾಗಿ ಅವರನ್ನು ಪರಿಗಣಿಸಲಾಯಿತು. ನಿರೀಕ್ಷೆಯಂತೆ ಜಯಂತ್ ಉತ್ತಮ ಬೌಲಿಂಗ್ ಮಾಡಿದರು ಎಂದರು.
ಚೆನ್ನೈ ವಿರುದ್ಧದ ಗೆಲುವಿನ ಗುಟ್ಟು ಬಿಟ್ಟುಕೊಟ್ಟ ರೋಹಿತ್, ಯಾವುದೇ ಪಿಚ್‌ಗಳಿದ್ದರೂ ಅದಕ್ಕೆ ತಕ್ಕಂತೆ ಅಂತಿಮ 11 ಆಟಗಾರರನ್ನು ಸಮಯೋಜನೆ ಮಾಡುವುದು ಅತ್ಯಂತ ಮುಖ್ಯ. ಪಂದ್ಯಕ್ಕೂ ಮುನ್ನ ಪಿಚ್ ಗಮನಿಸಿ ತಂಡವನ್ನು ಅಂತಿಮಗೊಳಿಸಲಾಗುತ್ತದೆ. ಆದ್ದರಿಂದಲೇ ನಾವು ಚೆನ್ನೈ ಪಿಚ್‌ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಅಲ್ಲದೇ, ಪಿಚ್ ಪರಿಸ್ಥಿಯನ್ನೂ ನಾವು ಅರ್ಥ ಮಾಡಿಕೊಂಡು ಅದಕ್ಕೇ ತಕ್ಕಂತೆ ಆಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


