ಕ್ರಿಕೆಟ್

ಬೆಂಗಳೂರಿನಲ್ಲಿ 'ಗಲ್ಲಿ ಕ್ರಿಕೆಟ್' ಆಡಿದ ಕೆವಿನ್ ಪೀಟರ್ಸನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್, ಗಲ್ಲಿ ಕ್ರಿಕೆಟ್ ಆಡಿದ್ದಾರೆ.

ಬೆಂಗಳೂರಿನಲ್ಲಿ 'ಗಲ್ಲಿ ಕ್ರಿಕೆಟ್' ಆಡಿದ ಕೆವಿನ್ ಪೀಟರ್ಸನ್!
ಕೇವಿನ್ ಪೀಟರ್ಸನ್
Published On :
ಬೆಂಗಳೂರು: ರಾಯಲ್ ಚಾಲೆಂಜರ್ಸ್  ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್, ಗಲ್ಲಿ ಕ್ರಿಕೆಟ್ ಆಡಿದ್ದಾರೆ.
ಗಲ್ಲಿ ಕ್ರಿಕೆಟ್ ನಲ್ಲಿ ಹೊಡೆದ ಪವರ್ ಪುಲ್ ಶಾಟ್ ವಿಡಿಯೋವನ್ನು ಪೀಟರ್ಸನ್ ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದಿನ ಎಂತಹ ಮಹತ್ವದ ದಿನ #ಗಲ್ಲಿ ಕ್ರಿಕೆಟ್ ಎಂಬ ಅಡಿಬರಹದಲ್ಲಿ ತಮ್ಮ ವಿಡಿಯೋವನ್ನು ಪೀಟರ್ಸನ್ ಹಂಚಿಕೊಂಡಿದ್ದಾರೆ.
ನಂತರ ಆ ಹುಡುಗರೊಂದಿಗೆ ಪೀಟರ್ಸನ್ ಸಂವಾದ ನಡೆಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವವರು ನಿರ್ಧಾರ ತೆಗೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ ಎಂದು ಅವರು ಹುಡುಗರಿಗೆ ತಿಳುವಳಿಕೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್  ಹಾಗೂ ದೆಹಲಿ ಕ್ಯಾಪಿಟಲ್ ತಂಡಗಳ ನಡುವೆ ಕ್ರಮವಾಗಿ ರಾಯಲ್ ಚಾಲೆಂಜರ್ಸ್  ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಸೋತಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ಭರವಸೆಯೊಂದಿಗೆ ಕಾದಾಟ ನಡೆಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.