ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ: ಎಂಎಸ್ ಧೋನಿ ಆಕ್ರೋಶದ ಮಾತು!
ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

Published On :
ಚೆನ್ನೈ: ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷ್ಯಾ ಚಿತ್ರವೊಂದರಲ್ಲಿ ಮಾತನಾಡಿರುವ ಎಂಎಸ್ ಧೋನಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಒಂದು ದೊಡ್ಡ ಅಪರಾಧ ನಾನು ಮಾಡಬಹುದಾದರೆ ಅದು ಕೊಲೆ ಅಲ್ಲ, ಬದಲಾಗಿ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದಾಗಲೇ ಮ್ಯಾಚ್ ಫಿಕ್ಸಿಂಗ್ ಆದ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ತಂಡವನ್ನು ಎರಡು ವರ್ಷಗಳ ಬ್ಯಾನ್ ಮಾಡಲಾಗಿತ್ತು.
ಮ್ಯಾಚ್ ಫಿಕ್ಸಿಂಗ್ ಆರೋಪ ನನ್ನ ಬದುಕಿನಲ್ಲಿ ಅನುಭವಿಸಿದ ಕರಾಳ ನೆನಪು. ತಂಡಕ್ಕೆ ಅದು ಸಹಿಸಲು ಅಸಾಧ್ಯವಾದ ನೋವು ತಂದಿತ್ತು. ನಾನೂ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದೆ. ವಾಪಸ್ ತಂಡಕ್ಕೆ ಮರಳಿರುವುದು ಒಂದು ಭಾವುಕ ಕ್ಷಣವನ್ನು ಹುಟ್ಟು ಹಾಕಿತ್ತು ಎಂದರು.
ಸಾಕ್ಷ್ಯಾ ಚಿತ್ರದ 45 ಸೆಕೆಂಡ್ ಗಳ ಟ್ರೈಲರ್ ನಲ್ಲಿ ಧೋನಿ ಈ ಮಾತನ್ನು ಹೇಳಿದ್ದಾರೆ. ಈ ಸಾಕ್ಷ್ಯಾ ಚಿತ್ರವು ಮೇ 20ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS DhoniCSKಎಂಎಸ್ ಧೋನಿಮ್ಯಾಚ್ ಫಿಕ್ಸಿಂಗ್match fixingಸಿಎಸ್ಕೆCricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


