ವಿಶ್ವಕಪ್ ಟೂರ್ನಿ ಬಳಿಕವೂ ಎಂಎಸ್ ಧೋನಿ ತಂಡದಲ್ಲಿರಬೇಕು: ಗಂಗೂಲಿ
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎಂಎಸ್ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದು 2019ರ ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿ ಮುಂದುವರಿಯಬೇಕು...

Published On :
ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎಂಎಸ್ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದು 2019ರ ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿ ಮುಂದುವರಿಯಬೇಕು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಧೋನಿಗೆ 37 ವರ್ಷವಾಗಿರಬಹುದು ಆದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ. ಪ್ರತಿಭೆ ಇದ್ದರೆ ತಂಡದಲ್ಲಿ ಮುಂದುವರಿಯುವುದು ಸೂಕ್ತ. ಧೋನ ಇದೇ ರೀತಿ ಬ್ಯಾಟಿಂಗ್ ಮಾಡಿದರೆ 2019ರ ವಿಶ್ವಕಪ್ ಟೀಂ ಇಂಡಿಯಾ ಗೆಲ್ಲಲಿದೆ ಎಂದು ಗಂಗೂಲಿ ಹೇಳಿದ್ದಾರೆ.
ಸದ್ಯ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದೆ. ಜಸ್ ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಸೇರಿದಂತೆ ಟೀಂ ಇಂಡಿಯಾ ವೇಗಿಗಳು ಎದುರಾಳಿಯನ್ನು ಸುಲಭವಾಗಿ ಕಟ್ಟಿ ಹಾಕಬಲ್ಲರು ಎಂದು ಗಂಗೂಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaMS DhoniSourav Gangulyಸೌರವ್ ಗಂಗೂಲಿಎಂಎಸ್ ಧೋನಿ2019 World Cupವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


