ಕ್ರಿಕೆಟ್

ಪಾಕ್-ಆಫ್ಘನ್ ಪಂದ್ಯ: ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಮಾರಾಮಾರಿ!

ಹೆಡಿಂಗ್ಲೇಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದರೆ, ಅತ್ತ ಮೈದಾನದ ಹೊರಗೆ ಉಭಯ ದೇಶಗಳ ನಡುವಿನ ಅಭಿಮಾನಿಗಳು ಪರಸ್ಪರ ಮಾರಾಮಾರಿಯಲ್ಲಿ ತೊಡಗಿದ್ದ ಘಟನೆ ನಡೆದಿದೆ.

ಪಾಕ್-ಆಫ್ಘನ್ ಪಂದ್ಯ: ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಮಾರಾಮಾರಿ!
ಅಭಿಮಾನಿಗಳ ಮಾರಾಮಾರಿ
Published On :
ಲೀಡ್ಸ್: ಹೆಡಿಂಗ್ಲೇಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದರೆ, ಅತ್ತ ಮೈದಾನದ ಹೊರಗೆ ಉಭಯ ದೇಶಗಳ ನಡುವಿನ ಅಭಿಮಾನಿಗಳು ಪರಸ್ಪರ ಮಾರಾಮಾರಿಯಲ್ಲಿ ತೊಡಗಿದ್ದ ಘಟನೆ ನಡೆದಿದೆ.
ಲೀಡ್ಸ್​ನಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆ ಉಭಯ ತಂಡಗಳ ಅಭಿಮಾನಿಗಳು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಪಂದ್ಯ ನಡೆಯುತ್ತಿರುವ ಹೆಡಿಂಗ್ಲೆ, ಕ್ರೀಡಾಂಗಣದ ಹೊರಗಡೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹೊಡೆದಾಡಿಕೊಂಡಿರುವ ವಿಡಿಯೋ ಸಖತ್​ ವೈರಲ್​ ಆಗಿದೆ.
ಕ್ರೀಡಾಂಗಣದಲ್ಲಿ ಮಾರ್ಧನಿಸಿದ ಬಲೂಚಿಸ್ತಾನ ಘೋಷಣೆ
ಇನ್ನು ಪಾಕ್-ಆಫ್ಘನ್ ಅಭಿಮಾನಿಗಳ ಬಡಿದಾಟಕ್ಕೆ ಬಲೂಚಿಸ್ತಾನ ಘೋಷಣೆ ಕಾರಣ ಎನ್ನಲಾಗಿದೆ.  ಈ ಕುರಿತು ಬಲೂಚಿಸ್ತಾನ್ ಪರ ಘೋಷಣೆಗಳನ್ನ ಮತ್ತು ರಾಜಕೀಯ ಸಂದೇಶಗಳು ಹೊಂದಿರುವ ಅನಧಿಕೃತ ವಿಮಾನವೊಂದು ಲೀಡ್ಸ್ ಕ್ರೀಡಾಂಗಣದ ಮೇಲೆ ಹಾರಿತ್ತು. ಇದನ್ನು ಕಂಡ ಅಭಿಮಾನಿಗಳು ಗದ್ದಲವೆಬ್ಬಿಸುತ್ತಿದ್ದಂತೆ ಕಾರ್ಯ ನಿರತ ಸಿಬ್ಬಂದಿ ಅವರನ್ನ ಸ್ಟೇಡಿಯಂನಿಂದ ಹೊರಗೆ ಹಾಕಲು ಯತ್ನಿಸಿದ್ದಾರೆ. ಹೀಗೆ ಹೊರ ಹಾಕಲ್ಪಟ್ಟಿದ್ದ ಅಭಿಮಾನಿಗಳು ಅತಿಕ್ರಮಣವಾಗಿ ಮೈದಾನದ ಗೋಡೆ ಜಿಗಿದು, ಕ್ರೀಡಾಂಗಣ ಪ್ರವೇಶ ಮಾಡುತ್ತಿದ್ದರು. ಇದನ್ನು ಕಂಡ ಕೆಲ ಪಾಕಿಸ್ತಾನದ ಅಭಿಮಾನಿಗಳು ಇದಕ್ಕೆ ವಿರೋಧ ಪಡಿಸಿದ್ದಾರೆ. 
ಈ ವೇಳೆ ಉಭಯ ದೇಶಗಳ ಅಭಿಮಾನಿಗಳು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.