ಮತ್ತೆ ಮೌಕಾ.. ಮೌಕಾ.. ಇಂಡೋ-ಇಂಗ್ಲೆಂಡ್ ಪಂದ್ಯದ ನಡುವೆ ವೈರಲ್ ಆಯ್ತು ಹೊಸ ಜಾಹಿರಾತು!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುತ್ತಿರುವಂತೆಯೇ ಮತ್ತೊಂದು ಮೌಕಾ.. ಮೌಕಾ ಜಾಹಿರಾತು ವೈರಲ್ ಆಗುತ್ತಿದೆ.

Published On :
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುತ್ತಿರುವಂತೆಯೇ ಮತ್ತೊಂದು ಮೌಕಾ.. ಮೌಕಾ ಜಾಹಿರಾತು ವೈರಲ್ ಆಗುತ್ತಿದೆ.
ಇಂದಿನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಭಾರತಕ್ಕೆ ಅಷ್ಟೇನೂ ಮಹತ್ವದ್ದು ಅಲ್ಲದೇ ಹೋದರೂ ಸೆಮೀಸ್ ನಲ್ಲಿ ಸ್ಥಾನ ಗಟ್ಟಿಗಳಿಸಿಕೊಳ್ಳಲು ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಇಂಗ್ಲೆಂಡ್ ಪಾಲಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆದ್ದರೆ ಮಾತ್ರ ಸೆಮೀಸ್ ನಲ್ಲಿ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಸೋತರೆ ಪಾಕಿಸ್ತಾನಕ್ಕೆ ಆ ಅವಕಾಶ ಲಭಿಸುವ ಸಾಧ್ಯತೆ ಇದೆ. ಪಾಕಿಸ್ತಾನ ಮಾತ್ರವಲ್ಲದೇ ಸೆಮೀಸ್ ರೇಸ್ ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಇವೆ. ಪಾಕಿಸ್ತಾನ ತಂಡ ತಾನಾಡಿರುವ 8 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದು 8 ಅಂಕಗಳನ್ನು ಹೊಂದಿದೆ. ಅಂತೆಯೇ ಬಾಂಗ್ಲಾದೇಶ ತಂಡ ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು 8 ಅಂಕ ಪಡೆದಿದೆ. ಇನ್ನು ಶ್ರೀಲಂಕಾ ತಂಡ 7 ಪಂದ್ಯಗಳನ್ನಾಡಿ 2 ಪಂದ್ಯ ಗೆದ್ದು 6 ಅಂಕಗಳನ್ನು ಹೊಂದಿದೆ. ಈ ಪೈಕಿ ಶ್ರೀಲಂಕಾ ತಂಡದ ಸೆಮೀಸ್ ಆಸೆ ಕ್ಷೀಣ ಎನ್ನಬಹುದು. ಲಂಕಾ ಬಳಿ ಇನ್ನೂ ಒಂದು ಪಂದ್ಯವಿದ್ದು, ಆ ಪಂದ್ಯವನ್ನು ಗೆದ್ದರೆ ಲಂಕಾದ ಅಂಕಗಳಿಕೆ 8ಕ್ಕೆರುತ್ತದೆ. ಆದರೆ ಬಾಂಗ್ಲಾದೇಶ ಕೂಡ ಒಂದು ಪಂದ್ಯವನ್ನಾಡಲಿದ್ದು, ಆ ಪಂದ್ಯ ಗೆದ್ದರೆ ಬಾಂಗ್ಲಾ ಅಂಕ ಗಳಿಕೆ 9ಕ್ಕೆ ಏರಿಕೆಯಾಗಿ ಆ ತಂಡಕ್ಕೆ ಅವಕಾಶದ ಬಾಗಿಲು ತೆರೆಯುತ್ತದೆ.
ಇದೇ ಕಾರಣಕ್ಕೆ ಇದೀಗ ಮತ್ತೆ ಮೌಕಾ ಮೌಕಾ ಜಾಹಿರಾತು ವೈರಲ್ ಆಗುತ್ತಿದ್ದು, ಭಾರತದ ಗೆಲುವಿನ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದ ಎದುರು ವಿಶ್ವಕಪ್ ನಲ್ಲಿ ಸೆಣಸುವ ಅವಕಾಶ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತPakistanಪಾಕಿಸ್ತಾನಇಂಗ್ಲೆಂಡ್EnglandMauka MaukaICC World Cup 2019ಐಸಿಸಿ ವಿಶ್ವಕಪ್ 2019ಮೌಕಾಮೌಕಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


