ಪಾಕ್ ವರ್ಸಸ್ ಆಫ್ಘಾನಿಸ್ತಾನ: ಮೊದಲ ವಿಶ್ವಕಪ್ ನಲ್ಲೇ ದಾಖಲೆ ಬರೆದ 'ಅಫ್ರಿದಿ'
ತಾನಾಡಿದ ಮೊದಲ ವಿಶ್ವಕಪ್ ನಲ್ಲೇ ಪಾಕಿಸ್ತಾನದ ಆಟಗಾರ ಆಫ್ರಿದಿ ವಿಶ್ವ ದಾಖಲೆ ಬರೆದಿದ್ದಾರೆ.

Published On :
ಲೀಡ್ಸ್: ತಾನಾಡಿದ ಮೊದಲ ವಿಶ್ವಕಪ್ ನಲ್ಲೇ ಪಾಕಿಸ್ತಾನದ ಆಟಗಾರ ಆಫ್ರಿದಿ ವಿಶ್ವ ದಾಖಲೆ ಬರೆದಿದ್ದಾರೆ.
ಅರೆ ಇದೇನಿದು ಶಾಹಿದ್ ಅಫ್ರಿದಿ ನಿವೃತ್ತಿಯಾಗಿ ತುಂಬಾ ದಿನಗಳೇ ಕಳೆದಿವೆ. ಮತ್ತೆ ವಿಶ್ವ ದಾಖಲೆ ಹೇಗೆ ಎಂದು ಪ್ರಶ್ನೆ ಮಾಡಬೇಡಿ.. ನಾವು ಹೇಳುತ್ತಿರುವುದು ಪಾಕಿಸ್ತಾನದ ಉದಯೋನ್ಮುಖ ಆಟಗಾರ ಶಾಹೀನ್ ಅಫ್ರಿದಿ ಕುರಿತು.
ಹೌದು.. ಪಾಕಿಸ್ತಾನ ತಂಡದ ಅತ್ಯಂತ ಯುವ ಆಟಗಾರ ಮತ್ತು ಉದಯೋನ್ಮುಖ ವೇಗಿ ಶಾಹೀನ್ ಅಫ್ರಿದಿ ಇಂದು ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ತೋರಿ ವಿಶ್ವದಾಖಲೆ ಬರೆದಿದ್ದಾರೆ. ಆಫ್ಘಾನಿಸ್ತಾನದ ವಿರುದ್ಧ ಶಾಹೀನ್ ಅಫ್ರಿದಿ 10 ಓವರ್ ಗಳಲ್ಲಿ 47 ರನ್ ನೀಡಿ ಪ್ರಮುಖ ನಾಲ್ತು ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಅಫ್ರಿದಿ ವಿಶ್ವದಾಖಲೆ ಬರೆದಿದ್ದು, ವಿಶ್ವಕಪ್ ಪಂದ್ಯವೊಂದರಲ್ಲಿ 4 ವಿಕೆಟ್ ಪಡೆದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮೊದಲು 1999ರ ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಆಟಗಾರ ಜಾನ್ ಬ್ಲೇನ್ ಬಾಂಗ್ಲಾದೇಶದ ವಿರುದ್ಧ ಈ ಸಾಧನೆ ಮಾಡಿದ್ದರು. ಅಂದು ಬ್ಲೇನ್ ವಯಸ್ಸು 20 ವರ್ಷ 140 ದಿನಗಳಾಗಿತ್ತು, ಆದರೆ ಇಂದು ಈ ದಾಖಲೆಯನ್ನು ಅಫ್ರಿದಿ ಮುರಿದಿದ್ದು, ಇಂದಿಗೆ ಅವರ ವಯಸ್ಸು 19 ವರ್ಷ 84 ದಿನಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್Pakistanಪಾಕಿಸ್ತಾನAfghanistanಆಫ್ಘಾನಿಸ್ತಾನICC World Cup 2019ಐಸಿಸಿ ವಿಶ್ವಕಪ್ 2019Shaheen Afridiಶಾಹೀನ್ ಅಫ್ರಿದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


