ಆಂಡ್ರೆ ರಸ್ಸೆಲ್ ವಿಶ್ವಕಪ್ ಟೂರ್ನಿಯಿಂದ ಔಟ್, ಸುನಿಲ್ ಆಂಬ್ರಿಸ್ ಬದಲಿ ಆಟಗಾರ
ನಿರಂತರ ಮೊಣಕಾಲು ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರ ಬಿದಿದ್ದಾರೆ. ಅವರ ಜಾಗಕ್ಕೆ ಸುನೀಲ್ ಅಂಬ್ರೀಸ್ ಬದಲಿ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.

Published On :
ಲಂಡನ್ :ನಿರಂತರ ಮೊಣಕಾಲು ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರ ಬಿದಿದ್ದಾರೆ. ಅವರ ಜಾಗಕ್ಕೆ ಸುನೀಲ್ ಅಂಬ್ರೀಸ್ ಬದಲಿ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ರಸ್ಸೆಲ್ ನಾಲ್ಕು ಪಂದ್ಯಗಳನ್ನು ಹೇಗೋ ನಿರ್ವಹಣೆ ಮಾಡಿದ್ದರು.ವೆಸ್ಟ್ ಇಂಡೀಸ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ್ದ ರಸ್ಸೆಲ್ ನಂತರದ ಪಂದ್ಯಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ನಲ್ಲಿ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ಮೂರು ಇನ್ನಿಂಗ್ಸ್ ಗಳಲ್ಲಿ 36 ರನ್ ಗಳಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
2017ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಆಂಬ್ರಿಸ್, ಕೇವಲ ಆರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದಾಗ್ಯೂ, ಕಳೆದ ವಾರ ಐರ್ಲೆಂಡ್ ವಿರುದ್ಧದ ಮೂರು ಸರಣಿಗಳಲ್ಲಿ 148 ರನ್ ಗಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketWest indiesವೆಸ್ಟ್ ಇಂಡೀಸ್Andre RussellICC World Cup 2019ಐಸಿಸಿ ವಿಶ್ವಕಪ್ 2019Sunil Ambris ಕ್ರಿಕೆಟ್ಆಂಡ್ರೆ ರಸ್ಸೆಲ್ಸುನೀಲ್ ಅಂಬ್ರೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


