ಬ್ಯಾಟ್ ಬೀಸಿ 360 ಡಿಗ್ರಿ ಸುತ್ತಿ ಬಿದ್ದ ಬ್ಯಾಟ್ಸ್‌ಮನ್, ರನ್ ಓಡದೆ ಪೆವಿಲಿಯನ್ ಸೇರಿದ, ವಿಡಿಯೋ ವೈರಲ್!
ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Published On :
ಲಂಡನ್: ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ವೇಗವಾಗಿ ಚೆಂಡನ್ನು ಹೊಡೆದ ನ್ಯೂಜಿಲ್ಯಾಂಡ್ ದ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಆದರೆ ಅವರ ಕಾಲು ವಿಕೆಟ್ ಗೆ ತಗುಲಿದ್ದರಿಂದ ಬೇಲ್ಸ್ ಕೆಳಗೆ ಬಿದ್ದಿದ್ದರಿಂದ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು.
ದಕ್ಷಿಣ ಆಫ್ರಿಕಾ ವಿರುದ್ಧ 35 ರನ್ ಗಳಿಸಿದ್ದ ಮಾರ್ಟಿನ್ ಆಫ್ರಿಕಾದ ವೇಗಿ ಆ್ಯಂಡಿಲೆ ಫೆಲುಕ್ವಾಯೋ ಎಸೆತದಲ್ಲಿ ಬಾರೀ ಹೊಡೆತಕ್ಕೆ ಮುಂದಾದರು. ಆದರೆ ನಿಯಂತ್ರಣ ತಪ್ಪಿ 360 ಡಿಗ್ರಿ ಸುತ್ತಿ ಕೆಳಗೆ ಬಿದ್ದರು. ಈ ವೇಳೆ ಅವರ ಕಾಲು ವಿಕೆಟ್ ಗೆ ತಗುಲಿದ್ದರಿಂದ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು.
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆಫ್ರಿಕಾ ವಿರುದ್ಧ 4 ವಿಕೆಟ್ ಗಳಿಂದ ಜಯಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವೀಟರ್New Zealandದಕ್ಷಿಣ ಆಫ್ರಿಕಾSouth Africaನ್ಯೂಜಿಲ್ಯಾಂಡ್ಮಾರ್ಟಿನ್ ಗುಪ್ಟಿಲ್Martin GuptillCricket Offbeatಕ್ರಿಕೆಟ್ ಸ್ವಾರಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


