ವಿಶ್ವಕಪ್ ಕ್ರಿಕೆಟ್ : ಬದ್ಧ ವೈರಿಗಳ ಕಾದಾಟ ವೀಕ್ಷಿಸಲು ಯೂನಿವರ್ಸ್ ಬಾಸ್ ಸಜ್ಜು!
ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೀಕ್ಷಿಸಲು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು ಧರಿಸಿ ಮಿಂಚುತ್ತಿದ್ದಾರೆ.

Published On :
ಮ್ಯಾಂಚೆಸ್ಟರ್ : ಕಳೆದ ಕೆಲವು ದಿನಗಳಿಂದ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಡ್ಡಿಯನ್ನುಂಟುಮಾಡಿದ್ದ ವರುಣ ದೇವ ಬಿಡುವು ಮಾಡಿಕೊಂಡಿದ್ದು, ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ಕಾದಾಟ ವೀಕ್ಷಣೆಗೆ ನೆರವು ನೀಡಿರುವುದರಿಂದ ಇಡೀ ವಿಶ್ವವೇ ಪಂದ್ಯವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತ ಕುಳಿತಿದೆ.
ಸ್ಥಳೀಯ ಕಾಲಮಾನ ಮೂರು ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಭಾರತ - ಪಾಕಿಸ್ತಾನದ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಮೈದಾನದೊಳಗೆ ಲಗ್ಗೆ ಹಾಕಿದ್ದಾರೆ. ತಮ್ಮ ರಾಷ್ಟ್ರದ ಧ್ವಜ ಹಾಗೂ ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಜಯ ಘೋಷಗಳನ್ನು ಮೊಳಗಿಸುತ್ತಿದ್ದಾರೆ.
ಈ ಮಧ್ಯೆ ಪಂದ್ಯ ವೀಕ್ಷಣೆಗೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು ಧರಿಸಿ ಮಿಂಚುತ್ತಿದ್ದಾರೆ.
ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಗೇಲ್, ಬಲಗಡೆ ಭಾರತ ಹಾಗೂ ಎಡಗಡೆ ಪಾಕಿಸ್ತಾನದ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ಉಡುಪು ಧರಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ತಾವೂ ಶಾಂತಿಯ ಪ್ರತೀಕವಾಗಿ ಈ ಉಡುಪು ಧರಿಸಿದ್ದು, ಪಂದ್ಯ ವೀಕ್ಷಣೆ ಮಾಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಪಂದ್ಯMatchಕ್ರಿಸ್ ಗೇಲ್ಭಾರತ- ಪಾಕಿಸ್ತಾನIndia- PakistanICC World Cup 2019ಐಸಿಸಿ ವಿಶ್ವಕಪ್ 2019Chris gayle ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


