ವಿಂಡೀಸ್ ವಿರುದ್ಧದ ಸರಣಿ ಮೂಲಕ ಭಾರತದ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭ
ಐಸಿಸಿ ವಿಶ್ವಕಪ್ ಟೂರ್ನಿ ಬೆನ್ವಲ್ಲೇ ಟೀಂ ಇಂಡಿಯಾ ಸುದೀರ್ಘ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಪ್ರಮುಖವಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಕೊಹ್ಲಿ ಪಡೆ ಅಲ್ಲಿಂದಲೇ ತನ್ನ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭಿಸಲಿದೆ.

Published On :
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿ ಬೆನ್ವಲ್ಲೇ ಟೀಂ ಇಂಡಿಯಾ ಸುದೀರ್ಘ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಪ್ರಮುಖವಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಕೊಹ್ಲಿ ಪಡೆ ಅಲ್ಲಿಂದಲೇ ತನ್ನ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭಿಸಲಿದೆ.
ಐಸಿಸಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ವಿರಾಟ್ ನಾಯಕತ್ವದ ಭಾರತ ತಂಡ ಕೆರಿಬಿಯನ್ ಪ್ರವಾಸ ಹಮ್ಮಿಕೊಳ್ಳಲಿದ್ದು, ಟಿ-20, ಏಕದಿನ ಜತೆಗೆ ಆಗಸ್ಟ್ 22 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಆಡಲಿದೆ. ಐದು ವಾರಗಳ ವಿಂಡೀಸ್ ಪ್ರವಾಸದಲ್ಲಿ ಮೂರು ಟಿ-20, ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡಗಳು ಎದುರಾಗಲಿವೆ. ಆಗಸ್ಟ್ 3 ಮತ್ತು 4 ರಂದು ಮೊದಲ ಎರಡು ಟಿ-20 ಅಮೆರಿಕದ ಫ್ಲೋರಿಡಾದ ಬ್ರೋವಾರ್ಡ್ ಕಂಟ್ರಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೂರನೇ ಟಿ-20 ಪಂದ್ಯ ಆಗಸ್ಟ್ 6 ರಂದು ಗಯಾನದ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪ್ರವಾಸದ ನಡುವೆಯೇ ಭಾರತ ತಂಡ ಐಸಿಸಿ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನವನ್ನೂ ಕೂಡ ಅರಂಭಿಸಲಿದ್ದು, 2019ರಿಂದ 2021ರವರೆಗೂ ನಡೆಯಲಿರುವ ಸುದೀರ್ಘ ಅವದಿಯವರೆಗೂ ಟೂರ್ನಿ ನಡೆಯಲಿದೆ. ಆಗಸ್ಚ್ 22 ರಿಂದ 26ರವರೆಗೆ ಗುಯಾನಾ ಆ್ಯಂಟಿಗುವಾ ಮತ್ತು ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ವರೆಗೆ ಜಮೈಕಾ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಕ್ರಿಕೆಟ್ ಇತಿಹಾಸದಲ್ಲೇ ಐಸಿಸಿ ಆಯೋಜಿಸುತ್ತಿರುವ ಸುದೀರ್ಘ ಕ್ರಿಕೆಟ್ ಸರಣಿ ಇದಾಗಿದ್ದು, ಮುಂದಿನ 2 ವರ್ಷಗಳ ಕಾಲ ನಡೆಯಲಿದೆ.
ಟೆಸ್ಟ್ ಮಾನ್ಯತೆ ಪಡೆದಿರುವ 12 ತಂಡಗಳ ಪೈಕಿ 9 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತೀ ತಂಡ ಕೂಡ ಉಳಿದ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ.
ವೇಳಾ ಪಟ್ಟಿ ಇಂತಿದೆ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತWest indiesವೆಸ್ಟ್ ಇಂಡೀಸ್ICC World Test Championshipಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಷಿಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


