ಅಂಪೈರ್‌ಗೆ ಡಿಕ್ಕಿ ಹೊಡೆದ ಬ್ಯಾಟ್ಸ್‌ಮನ್ ಜೇಸನ್ ರಾಯ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಂಪೈರ್‌ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

Published On :
ಕಾರ್ಡಿಫ್: ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಂಪೈರ್‌ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ಶತಕ ಸಿಡಿಸಿದ ಸಂಭ್ರಮದಲ್ಲಿ ಚೆಂಡನ್ನು ನೋಡಿಕೊಂಡು ಬಂದು ಅಂಪೈರ್ ಜೋಯೆಲ್ ವಿಲ್ಸನ್ ಗೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ಜೋಯೆಲ್ ವಿಲ್ಸನ್ ಅವರು ನೆಲಕ್ಕೆ ಕುಸಿದು ಬಿದ್ದರು. ಕೂಡಲೇ ನೆಲಕ್ಕೆ ಬಿದ್ದ ಅಂಪೈರ್ ರನ್ನು ರಾಯ್ ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ವಿಲ್ಸನ್ ಗೆ ಯಾವುದೇ ಗಾಯಗಳಾಗಿಲ್ಲ.
ಒಟ್ಟಿನಲ್ಲಿ ರೋಚಕದ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ 386 ರನ್ ಪೇರಿಸಿದ್ದು ಬಾಂಗ್ಲಾದೇಶ 280 ರನ್ ಗಳಿಗೆ ಆಲೌಟ್ ಆಗಿ 106 ರನ್ ಗಳಿಂದ ಸೋಲು ಕಂಡಿದೆ.
An unusual way to celebrate 100 for Jason Roy! We're glad umpire Joel Wilson is on his feet again and smiling!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


