ಐಸಿಸಿ ವಿಶ್ವಕಪ್ 2019: ಸೈನಿಕರ ಬಲಿದಾನಕ್ಕೆ ಎಂಎಸ್ ಧೋನಿ ವಿಶೇಷ ಗೌರವ ಸಲ್ಲಿಕೆ!
ಭಾರತೀಯ ಸೈನಿಕರ ಬಲಿದಾನಕ್ಕೆ ಪ್ರತೀಕವಾಗಿ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.

Published On :
ಲಂಡನ್: ಭಾರತೀಯ ಸೈನಿಕರ ಬಲಿದಾನಕ್ಕೆ ಪ್ರತೀಕವಾಗಿ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.
ಹೌದು.. ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು. ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ಆದರೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಟಿವಿ ರೀಪ್ಲೆ ವೇಳೆ ಧೋನಿ ಸ್ಟಂಪೌಂಟ್ ಅನ್ನು ಜೂಮ್ ಮಾಡಿ ತೋರಿಸುವಾಗ ಧೋನಿ ಗ್ಲೌಸ್ ಮೇಲಿದ್ದ ಸೈನಿಕರ ಬಲಿದಾನದ ಲೋಗೋ ಕೂಡ ಕಂಡಿದೆ. ಕೂಡಲೇ ಧೋನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿದೆ.
ಇನ್ನು ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು.
Balidan symbol on Dhoni's Wicket Keeping Gloves
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Londonಲಂಡನ್indiaIndian ArmyಇಂಡಿಯಾMS Dhoniದಕ್ಷಿಣ ಆಫ್ರಿಕಾSouth Africaಭಾರತೀಯಎಂಎಸ್ ಧೋನಿCricket Offbeatಕ್ರಿಕೆಟ್ ಸ್ವಾರಸ್ಯICC World Cup 2019ಐಸಿಸಿ ವಿಶ್ವ ಕಪ್ 2019
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


