ಐಸಿಸಿ ವಿಶ್ವಕಪ್ 2019: ಬಾಂಗ್ಲಾದೇಶಕ್ಕೆ ಮತ್ತೊಂದು ಆಘಾತ, ತಮೀಮ್ ಇಕ್ಬಾಲ್ ಗೆ ಗಾಯ
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಾಂಗ್ಲಾದೇಶ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

Published On :
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಾಂಗ್ಲಾದೇಶ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ತಮೀಮ್ ಇಕ್ಬಾಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ಹೌದು.. ಬ್ಯಾಟಿಂಗ್ ಅಭ್ಯಾಸ ಮಾಡುವ ವೇಳೆ ತಮೀಮ್ ಇಕ್ಬಾಲ್ ಎಡಗೈ ಮಣಿಕಟ್ಟಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಕೂಡಲೇ ತಮೀಮ್ ಅಭ್ಯಾಸವನ್ನು ಮೊಟಕುಗೊಳಿಸಿ ಡ್ರೆಸಿಂಗ್ ರೂಂಗೆ ಓಡಿ ಹೋದ ಘಟನೆ ನಡೆದಿದೆ. ತಮೀಮ್ ರನ್ನು ಪರೀಕ್ಷಿಸಿದ ಫಿಸಿಯೋ ಥಿಯಾನ್ ಚಂದ್ರಮೋಹನ್ ಅವರು ಮುಂಜಾಗ್ರತಾ ಕ್ರಮವಾಗಿ ತಮೀಮ್ ರನ್ನು ಎಕ್ಸ್ ರೇ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಯಾವುದೇ ರೀತಿಯ ಮೂಳೆ ಮುರಿತ ಕಂಡು ಬಂದಿಲ್ಲ. ಆದರೆ ತಮೀಮ್ ಗೆ ಸ್ನಾಯುಸೆಳೆತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಂತೆಯೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.
ಇನ್ನು ಭಾರತದ ವಿರುದ್ಧದ ಪಂದ್ಯಕ್ಕೆ ತಮೀಮ್ ಲಭ್ಯತೆ ಕುರಿತು ಇದೀಗ ಆತಂಕ ಮೂಡಿದೆ.
ಈಗಾಗಲೇ ಬಾಂಗ್ಲಾದೇಶ ತಂಡದ ಆಲ್ ರೌಂಡರ್ ಮೊಹಮದ್ ಸೈಫುದ್ದೀನ್ ಗಾಯಗೊಂಡಿರುವುದು ತಂಡದ ಆತಂಕಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ತಮೀಮ್ ಕೂಡ ಗಾಯಗೊಂಡಿರುವುದು ಆ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿಂದೆಯೂ ಕೂಡ ತಮೀಮ್ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿ ಭಾರತ ತಂಡದ ವಿರುದ್ಧದ ಅಭ್ಯಾಸ ಪಂದ್ಯದಿಂದ ದೂರ ಉಳಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್ಬಾಂಗ್ಲಾದೇಶBangladeshTamim Iqbalತಮೀಮ್ ಇಕ್ಬಾಲ್ಐಸಿಸಿ ವಿಶ್ವಕಪ್ ಟೂರ್ನಿ 2019ICC Word Cup 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


