ವಿಶ್ವಕಪ್ ಫೈನಲ್ ಪಂದ್ಯಕ್ಕೆ ಚೆಂಡು ಬಂದಿದ್ದು ಎಲ್ಲಿಂದ ಗೊತ್ತ? ಈ ವಿಡಿಯೋ ನೋಡಿ, ಮೈ ಜುಮ್ ಅನ್ನುತ್ತೆ!
ಟೂರ್ನಿಗಳು ರಸವತ್ತಾಗಿರಬೇಕೆಂದರೆ ಕೆಲವೊಂದು ವಿಸ್ಮಯಗಳನ್ನು ಮಾಡುತ್ತಿರಬೇಕಾಗುತ್ತದೆ. ಅಂತೆಯೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಚೆಂಡು ಆಗಸದಿಂದ ಬಂದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

Published On :
ಲಂಡನ್: ಟೂರ್ನಿಗಳು ರಸವತ್ತಾಗಿರಬೇಕೆಂದರೆ ಕೆಲವೊಂದು ವಿಸ್ಮಯಗಳನ್ನು ಮಾಡುತ್ತಿರಬೇಕಾಗುತ್ತದೆ. ಅಂತೆಯೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಚೆಂಡು ಆಗಸದಿಂದ ಬಂದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಸಾಮಾನ್ಯವಾಗಿ ಚೆಂಡನ್ನು ಅಂಪೈರ್ ಗಳೇ ತೆಗೆದುಕೊಂಡು ಬಂದು ಬೌಲರ್ ಗೆ ನೀಡುತ್ತಾರೆ. ಆದರೆ ಫೈನಲ್ ಪಂದ್ಯಕ್ಕೆ ಮಾತ್ರ ರೆಡ್ ಡೆವಿಲ್ಸ್ ತಂಡ ಪ್ಯಾರಾಚ್ಯೂಟ್ ಮೂಲಕ ಚೆಂಡನ್ನು ಹಿಡಿದು ಆಗಸದಿಂದ ಹಾರಾಡುತ್ತಾ ಬಂದು ಅಂಪೈರ್ ಗೆ ಚೆಂಡನ್ನು ನೀಡಿದರು.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಫೈನಲ್ ಪಂದ್ಯ ನಡೆಯುವ ಮುನ್ನ ರೆಡ್ ಡೆವಿಲ್ಸ್ ತಂಡ ಈ ಸಾಹಸಕ್ಕೆ ಪ್ರದರ್ಶಿಸಿದ್ದು ಇದನ್ನು ಕಂಡ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು.
What a way to start the day
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Londonಲಂಡನ್New Zealandಇಂಗ್ಲೆಂಡ್Englandನ್ಯೂಜಿಲ್ಯಾಂಡ್Cricket Offbeatಕ್ರಿಕೆಟ್ ಸ್ವಾರಸ್ಯBallParachuteಪ್ಯಾರಾಚೂಟ್World Cup 2019ಚೆಂಡುವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


