ಬ್ಯಾಟಿಂಗ್, ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಗೂ ರ‍್ಯಾಂಕಿಂಗ್ ನೀಡಿ.. ವೈರಲ್ ಆಯ್ತು ಅಭಿಮಾನಿಯ ಕೋರಿಕೆ!
ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಅನ್ನೂ ಕೂಡ ವಿಶೇಷ ಕೌಶಲ್ಯ ಎಂದು ಪರಿಗಣಿಸಿ ಅದಕ್ಕೂ ರ‍್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಮಾನಿಯೊಬ್ಬರು ಐಸಿಸಿಗೆ ಮನವಿ ಮಾಡಿದ್ದಾರೆ.

Published On :
ಲಂಡನ್: ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಅನ್ನೂ ಕೂಡ ವಿಶೇಷ ಕೌಶಲ್ಯ ಎಂದು ಪರಿಗಣಿಸಿ ಅದಕ್ಕೂ ರ‍್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಮಾನಿಯೊಬ್ಬರು ಐಸಿಸಿಗೆ ಮನವಿ ಮಾಡಿದ್ದಾರೆ.
ಇಂಡಿಯನ್ ಕ್ಯಾಪ್ಟನ್ (@lndianCaptain) ಎಂಬ ಟ್ವಿಟರ್ ಖಾತೆದಾರರ ಈ ಕುರಿತಂತೆ ಟ್ವೀಟ್ ಮಾಡಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ವಿಶೇಷ ಕೌಶಲ್ಯ ಎಂದು ಪರಿಗಣಿಸಿ ಅದಕ್ಕೆ ರ‍್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೇ ವಿಕೆಟ್ ಕೀಪಿಂಗ್ ಅನ್ನೂ ಕೂಡ ಐಸಿಸಿ ವಿಶೇಷ ಕೌಶಲ್ಯ ಎಂದು ಪರಿಗಣಿಸಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಗೂ ಕೂಡ ಸಾಕಷ್ಟು ಕೌಶಲ್ಯಗಳು ಬೇಕು.. ಪರಿಣಿತಿ ಹೊಂದಿರದ ಹೊರತು ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ವಿಕೆಟ್ ಕೀಪಿಂಗ್ ಗೂ ರ‍್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಐಸಿಸಿಗೆ ಮನವಿ ಮಾಡಿದ್ದಾರೆ.
ಅಂತೆಯೇ ಈ ಟ್ವೀಟ್ ಬೆನ್ನಲ್ಲೇ ಅವರು ಭಾರತದ ಹಿರಿಯ ಅಟಗಾರ ಮತ್ತು ತಂಡದ ಅತ್ಯಂತ ಯಶಸ್ವೀ ನಾಯಕ, ಯಶಸ್ವಿ ವಿಕೆಟ್ ಕೀಪರ್ ಧೋನಿ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್indiaಭಾರತICC World Cup 2019ಐಸಿಸಿ ವಿಶ್ವಕಪ್ 2019Ranking For Wicket Keepingವಿಕೆಟ್ ಕೀಪಿಂಗ್ ಗೆ ರ‍್ಯಾಂಕಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


