ವಿಶ್ವಕಪ್ ಸೋಲಿನ ಬೆನ್ನಲ್ಲೇ ಏಕದಿನ ಕ್ರಿಕೆಟ್ ಗೆ ಶೊಯೆಬ್ ಮಲ್ಲಿಕ್ ವಿದಾಯ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬಾಂಗ್ಲಾದೇಶದ ವಿರುದ್ದದ ಅಂತಿಮ ಪಂದ್ಯವನ್ನಾಡಿದ ಬೆನ್ನಲ್ಲೇ ಪಾಕಿಸ್ತಾನದ ಹಿರಿಯ ಆಟಗಾರ ಶೊಯೆಬ್ ಮಲ್ಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.

Published On :
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬಾಂಗ್ಲಾದೇಶದ ವಿರುದ್ದದ ಅಂತಿಮ ಪಂದ್ಯವನ್ನಾಡಿದ ಬೆನ್ನಲ್ಲೇ ಪಾಕಿಸ್ತಾನದ ಹಿರಿಯ ಆಟಗಾರ ಶೊಯೆಬ್ ಮಲ್ಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಇಂದು ಲಾರ್ಡ್ಸ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದ ಗೆಲುವಿನ ಬೆನ್ನಲ್ಲೇ ಶೊಯೆಬ್ ಮಲ್ಲಿಕ್ ಏಕದಿನ ಕ್ರಿಕೆಟ್ ವಿದಾಯ ಘೋಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ನ ಆಧಾರ ಸ್ಥಂಭವಾಗಿದ್ದ ಶೊಯೆಬ್ ಮಲ್ಲಿಕ್ ಇದೀಗ ತಮ್ಮ ಏಕದಿನ ಕ್ರಿಕೆಟ್ ಅಭಿಯಾನಕ್ಕೆ ವಿದಾಯ ಹೇಳಿದ್ದು, ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಪಾಕ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಒಟ್ಟು 287 ಏಕದಿನ ಪಂದ್ಯವನ್ನಾಡಿರುವ ಶೊಯೆಬ್ ಮಲ್ಲಿಕ್ 34.56 ಸರಾಸರಿಯಲ್ಲಿ 7534 ರನ್ ಗಳಿಸಿದ್ದಾರೆ. ಈ ಪೈಕಿ 9 ಶತಕ, 44 ಅರ್ಧಶತಕಗಳು ಸೇರಿವೆ. 2004ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಮಲ್ಲಿಕ್ 143 ರನ್ ಸಿಡಿಸಿದ್ದರು. ಇದು ಅವರ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಸಾಧನೆಯಾಗಿದೆ. ಅಂತೆಯೇ ಬೌಲಿಂಗ್ ನಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಶೊಯೆಬ್ ಮಲ್ಲಿಕ್, 158 ವಿಕೆಟ್ ಕಬಳಿಸಿದ್ದು, ಹಾಂಕಾಂಗ್ ವಿರುದ್ಧ 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಮಿಶ್ರ ಪ್ರದರ್ಶನ ನೀಡಿರುವ ಪಾಕಿಸ್ತಾನ ಪಾಕ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ತುತ್ತಾಗಿತ್ತು. ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನಕ್ಕೆ ನುಂಗಲಾಗರ ತುತ್ತಾಗಿ ಪರಿಣಮಿಸಿತ್ತು. ಅದರಲ್ಲೂ ಅಂದು ಶೊಯೆಬ್ ಮಲ್ಲಿಕ್ ಹೀನಾಯ ಪ್ರದರ್ಶನ ಅವರನ್ನು ವ್ಯಾಪಕ ಟ್ರೋಲ್ ಮಾಡುವಂತೆ ಮಾಡಿತ್ತು. ಕೇವಲ ಮಲ್ಲಿಕ್ ಮಾತ್ರವಲ್ಲದೇ ಅವರ ಪತ್ನಿ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರನ್ನು ಟ್ವೀಟಿಗರು ಮತ್ತು ಪಾಕ್ ನಟಿ ವೀಣಾ ಮಲ್ಲಿಕ್ ವ್ಯಾಪಕವಾಗಿ ಟೀಕಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಶೊಯೆಬ್ ಮಲ್ಲಿಕ್ 'ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ ಎಂದು ಹೇಳಿದ್ದಾರೆ. 'ನಾನು ಕಳೆದ 20 ವರ್ಷಗಳಿಂದ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ವೈಯುಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಾನೇ ಸ್ಪಷ್ಟನೆ ನೀಡಬೇಕು. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಜೂನ್ 13ರ ವಿಡಿಯೋ ಜೂನ್ 15ರ ವಿಡಿಯೋ ಅಲ್ಲ. ಅಂದರೆ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಎಲ್ಲ ಕ್ರಿಕೆಟಿಗರ ಪರವಾಗಿ ನಾನು ಕೇಳುತ್ತಿದ್ದೇನೆ. ಕನಿಷ್ಟ ಪಕ್ಷ ನಮ್ಮ ಕುಟುಂಬಗಳಿಗೆ ಗೌರವ ನೀಡಿ. ಕ್ಷುಲ್ಲಕ ವಿಚಾರದಲ್ಲಿ ನಮ್ಮ ಕುಟುಂಬಸ್ಖರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದರು.
A legend leaves the ODI field for the final time.
Thank you Shoaib Malik
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್Pakistanಪಾಕಿಸ್ತಾನನಿವೃತ್ತಿShoaib MalikretirementICC World Cup 2019ಐಸಿಸಿ ವಿಶ್ವಕಪ್ 2019ಶೊಯೆಬ್ ಮಲ್ಲಿಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


