ಕ್ರಿಕೆಟ್

ವಿಶ್ವಕಪ್ : ಬಾಂಗ್ಲಾದೇಶ ವಿರುದ್ಧ 500 ರನ್ ಗಳಿಸಲು ಪ್ರಯತ್ನಿಸುತ್ತೇವೆ- ಪಾಕ್ ನಾಯಕ ಸರ್ಫರಾಜ್

ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಬಹುತೇಕ ಭಗ್ನಗೊಂಡಿದ್ದರೂ ನಾಯಕ ಸರ್ಫರಾಜ್ ಮಾತ್ರ ಆಶಾಭಾವನೆ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಇಂದಿನ ಪಂದ್ಯದಲ್ಲಿ 500 ರನ್ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

Published On :
ಲಂಡನ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಬಹುತೇಕ ಭಗ್ನಗೊಂಡಿದ್ದರೂ ನಾಯಕ ಸರ್ಫರಾಜ್ ಮಾತ್ರ ಆಶಾಭಾವನೆ ಹೊಂದಿದ್ದಾರೆ. ಬಾಂಗ್ಲಾದೇಶ  ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ 500 ರನ್ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಪ್ರಸ್ತುತ  ಎಂಟು ಪಂದ್ಯಗಳಿಂದ 9 ಅಂಕಗಳನ್ನು ಪಡೆದಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ರನ್ ರೇಟಿಂಗ್ ನಲ್ಲಿ ಮುಂದಿದ್ದು, ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ, ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು  ಬಾಂಗ್ಲಾದೇಶ ವಿರುದ್ಧ 316 ರನ್ ಗಳ ಅಂತರದಿಂದ  ಗೆಲುವು ಸಾಧಿಸಬೇಕಾಗಿದೆ. ಒಂದು ವೇಳೆ ಬಾಂಗ್ಲಾದೇಶ ಟಾಸ್ ಗೆದ್ದರೂ ಪಾಕಿಸ್ತಾನ ಸೆಮಿಫೈನಲ್ ನಿಂದ ಹೊರಬೀಳುವ ಸಾಧ್ಯತೆ ಇದೆ.
ಇಂತಹ ಸಂದಿಗ್ಧತೆಯ ಸಂದರ್ಭದಲ್ಲೂ  ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಫರಾಜ್,  ಪಂದ್ಯವನ್ನು ಗೆಲ್ಲಲು ಪಾಕಿಸ್ತಾನ ತಂಡ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ನಮಗೂ ಅರಿವಿದೆ. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 500 ರನ್ ಗಳಿಸಲು ಪ್ರಯತ್ನಿಸುತ್ತೇವೆ. ಅಲ್ಲದೇ 50 ರನ್ ಗಳಿಗೆ ಬಾಂಗ್ಲಾದೇಶವನ್ನು ಕಟ್ಟಿಹಾಕಲು ಪ್ರಯತ್ನಿಸುತ್ತೇವೆ. ಇದರಿಂದಾಗಿ 316 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ  ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್  481 ರನ್  ಕಲೆಹಾಕಿ ಗೆಲುವು ಸಾಧಿಸಿರುವ ದಾಖಲೆ ಮಾಡಿದೆ. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಅತಿಹೆಚ್ಚು 399 ರನ್ ಗಳಿಸಿರುವ ಇತಿಹಾಸ ಹೊಂದಿದೆ. ಆದರೆ, ಇದೀಗ ಪಾಕಿಸ್ತಾನ ಒಂದು ವೇಳೆ 500 ರನ್ ಗಳಿಸಿದರೆ ದೊಡ್ಡದಾದ ಇತಿಹಾಸವೊಂದು ಸೃಷ್ಟಿಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.