ಕ್ರಿಕೆಟ್

ಇಂಗ್ಲೆಂಡ್ ನ ಭಿನ್ನ ಪರಿಸ್ಥಿತಿಗಳಿಗೆ ಬೇಗ ಹೊಂದಿಕೊಂಡು ಸ್ಥಿರ ಪ್ರದರ್ಶನ ತೋರಬೇಕು: ಕೆಎಲ್ ರಾಹುಲ್

ಇಂಗ್ಲೆಂಡ್‌ನ ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಂಡು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ತೋರಲು ಪ್ರಯತ್ನಿಸಬೇಕು ಎಂದು ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದಾರೆ.

ಇಂಗ್ಲೆಂಡ್ ನ ಭಿನ್ನ ಪರಿಸ್ಥಿತಿಗಳಿಗೆ ಬೇಗ ಹೊಂದಿಕೊಂಡು ಸ್ಥಿರ ಪ್ರದರ್ಶನ ತೋರಬೇಕು: ಕೆಎಲ್ ರಾಹುಲ್
ಸಂಗ್ರಹ ಚಿತ್ರ
Published On :
ಲಂಡನ್‌: ಇಂಗ್ಲೆಂಡ್‌ನ ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಂಡು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ತೋರಲು ಪ್ರಯತ್ನಿಸಬೇಕು ಎಂದು ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದಾರೆ.
ಶನಿವಾರ ಲೀಡ್ಸ್ ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಚಹಲ್ ಟಿವಿ ಜೊತೆ ಮಾತನಾಡಿದ ಕೆಎಲ್ ರಾಹುಲ್, ಪಿಚ್ ಗೆ ಹೊಂದಿಕೊಂಡು ಸ್ಥಿರ ಪ್ರದರ್ಶನ ತೋರಿದರೆ, ಖಂಡಿತಾ ತಂಡದಲ್ಲಿ ಉಳಿಯಬಹುದು ಎಂದು ಕೆಲ ವರ್ಷಗಳಲ್ಲಿ ಅರಿತೆ. ಅದರಂತೆ ಇದೀಗ ಪಿಚ್ ಗೆ ಅನುಗುಣವಾಗಿ ನನ್ನ ಬ್ಯಾಟಿಂಗ್ ತಂತ್ರಗಾರಿಕೆ ರೂಪಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂತೆಯೇ ಸೌಥಾಂಪ್ಟನ್‌, ಮ್ಯಾಂಚೆಸ್ಟರ್‌ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ನಿಧಾನಗತಿಯ ಪಿಚ್‌ಗಳಿದ್ದವು. ಆ ಅಂಗಳಗಳಲ್ಲಿ ಮೊದಲು ನಿಧಾನವಾಗಿ ಆಡಿ, ಆಟಕ್ಕೆ ಕುದುರಿಕೊಂಡ ನಂತರ ವೇಗವಾಗಿ ರನ್‌ ಗಳಿಸುವುದು ನನ್ನ ಯೋಜನೆಯಾಗಿತ್ತು. ಅದಕ್ಕನುಗುಣವಾಗಿಯೇ ಆಡಿದೆ ಎಂದು ರಾಹುಲ್ ಹೇಳಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಬ್ಯಾಟಿಂಗ್ ಶ್ಲಾಘಿಸಿದ ರಾಹುಲ್, ರೋಹಿತ್‌ ಶರ್ಮಾ ಅಮೋಘ ಲಯದಲ್ಲಿದ್ದಾರೆ. ಈಗಾಗಲೇ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ. ಇಂಗ್ಲೆಂಡ್ ನ ಪಿಚ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಲು ಅವರಿಂದ ಮಾತ್ರ ಸಾಧ್ಯ. ರೋಹಿತ್ ಜೊತೆ ಕ್ರೀಸ್ ನಲ್ಲಿದ್ದರೆ, ನಾನು ಬ್ಯಾಟಿಂಗ್ ಗೆ ಕುದುರಿಕೊಳ್ಳಲು ಕೆಲ ಸಮಯಾವಕಾಶ ಸಿಗುತ್ತದೆ. ಪ್ರತೀ ಇನ್ನಿಂಗ್ಸ್ ನಲ್ಲೂ ನಾನು ನನ್ನ ಬ್ಯಾಟಿಂಗ್ ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. 
ಇಂಗ್ಲೆಂಡ್ ಪಿಚ್ ಗಳನ್ನು ಲಘವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ರಾಹುಲ್, ಪಿಚ್ ನ ಮರ್ಮವನ್ನು ರೋಹಿತ್ ಚೆನ್ನಾಗಿಯೇ ಮನಗಂಡಿದ್ದಾರೆ. ಹೀಗಾಗಿ ಅವರು ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದು, ಈಗಾಗಲೇ ನಾಲ್ಕು ಶತಕ ಬಾರಿಸಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.