ಐಸಿಸಿ ವಿಶ್ವಕಪ್ 2019: ವಿಂಡೀಸ್ ವಿರುದ್ಧ ಆಫ್ಘನ್ ಗೆ 23 ರನ್ ಗಳ ವಿರೋಚಿತ ಸೋಲು!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ವಿಂಡೀಸ್ ವಿರುದ್ಧ 23 ರನ್ ಗಳ ವಿರೋಚಿತ ಸೋಲು ಕಂಡಿದೆ.

Published On :
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೊನೆಯ ಪಂದ್ಯದಲ್ಲೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ವಿಂಡೀಸ್ ವಿರುದ್ಧ 23 ರನ್ ಗಳ ವಿರೋಚಿತ ಸೋಲು ಕಂಡಿದೆ.
ಲೀಡ್ಸ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ವಿಂಡೀಸ್ ನೀಡಿದ 311 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ ನಿಗದಿತ 50 ಓವರ್ ಗಳಲ್ಲಿ 288 ರನ್ ಗಳಿಗೆ ಆಲೌಟ್ ಆಯಿತು. ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನಕ್ಕೆ ವಿಂಡೀಸ್ ಆರಂಭಿಕ ಆಘಾತ ನೀಡಿತು. ಐದು ರನ್ ಗಳಿಸಿದ್ದ ಆಫ್ಘನ್ ಆರಂಭಿಕ ಬ್ಯಾಟ್ಸ್ ಮನ್ ಗುಲ್ಬದಿನ್ ನೈಬ್ ರೋಚ್ ಬೌಲಿಂಗ್ ನಲ್ಲಿ ಔಟ್ ಆದರು.ಬಳಿಕ ರೆಹ್ಮತ್ ಶಾ ಜೊತೆಗೂಡಿದ ಇಕ್ರಾಮ್ ಅಲಿ ಖಿಲ್ ಅದ್ಭುತ ಜೊತೆಯಾಟವಾಡಿದರು. ಈ ಜೋಡಿ 132 ರನ್ ಗಳ ಅಮೋಘ ಜೊತೆಯಾಟವಾಡಿ ಆಫ್ಘಾನಿಸ್ತಾನಕ್ಕೆ ಗೆಲುವಿನ ಆಸೆ ಚಿಗುರಿಸಿತು.
ಈ ಹಂತದಲ್ಲಿ 62 ರನ್ ಗಳಿಸಿದ್ದ ರೆಹ್ಮತ್ ಶಾ ಔಟ್ ಆದರು. ಬಳಿಕ ಇಕ್ರಮ್ ಅಲಿ ಖಿಲ್ ಕೂಡ 86 ರನ್ ಗಳಿಸಿ ಶತಕದ ಅಂಚಿನಲ್ಲಿ ನಿರ್ಗಮಿಸಿದರು. ನಜೀಬುಲ್ಲಾ ಜಡ್ರನ್ 31 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಬಳಿಕ ಅಸ್ಘರ್ ಅಫ್ಘನ್ 40 ರನ್ ಗಳಿಸಿ ಔಟ್ ಆದರು. ಈ ಹಂತದಲ್ಲಿ ಆಫ್ಘಾನಿಸ್ತಾನ ಉತ್ತಮ ಸ್ಥಿತಿಯಲ್ಲಿತ್ತಾದರೂ, ಕಾರ್ಲೋಸ್ ಬ್ರಾಥ್ ವೇಟ್ ದಾಳಿಗೆ ತತ್ತರಿಸಿ ಹೋದ ಆಫ್ಘಾನಿಸ್ತಾನ ಕೇವಲ 94 ರನ್ ಗಳ ಅಂತರದಲ್ಲಿ ಆರು ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಅಂತಿಮ ಹಂತದಲ್ಲಿಯೂ ರಕೆಳ ಕ್ರಮಾಂಕದ ಆಟಗಾರ ಶಿಜಾದ್ 25 ರನ್ ಗಳಿಸಿ ವಿಂಡೀಸ್ ಗೆ ಸೋಲಿನ ಭೀತಿ ಮೂಡಿಸಿದರು. ಥಾಮಸ್ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಆಫ್ಘಾನಿಸ್ತಾನ ಹೋರಾಟ ಕೊನೆಯಾಯಿತು.
ಆ ಮೂಲಕ ಆಫ್ಘಾನಿಸ್ತಾನ 23 ರನ್ ಗಳ ವಿರೋಚಿತ ಸೋಲು ಕಂಡಿತು. ವಿಂಡೀಸ್ ಪರ ಕಾರ್ಲೋಸ್ ಬ್ರಾಥ್ ವೇಟ್ 4 ವಿಕೆಟ್ ಪಡೆದರೆ, ರೋಚ್ 3 ವಿಕೆಟ್ ಪಡೆದರು. ಥಾಮಸ್ ಮತ್ತು ಕ್ರಿಸ್ ಗೇಯ್ಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ವಿಂಡೀಸ್ ತಂಡ, ಇವೆನ್ ಲೂಯಿಸ್ (58 ರನ್), ಶಾಯ್ ಹೋಪ್ (77ರನ್), ನಿಕೋಲಸ್ ಪೂರನ್ (58 ರನ್) ಅವರ ಆಕರ್ಷಕ ಅರ್ಧಶತಕಗಳ ಮೂಲಕ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್AfghanistanWest indiesಅಫ್ಘಾನಿಸ್ತಾನವೆಸ್ಟ್ ಇಂಡೀಸ್ICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


