ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಸರಣಿ ಸೋಲು, ಹೀನಾಯ ದಾಖಲೆ ಬರೆದ ಆಫ್ಘಾನಿಸ್ತಾನ!

ಐಸಿಸಿ ವಿಶ್ವಕಪ್ 2019ರಲ್ಲಿ ಒಂದೂ ಗೆಲುವು ಕಾಣದೆ ಟೂರ್ನಿ ಮುಕ್ತಾಯಗೊಳಿಸಿದ ಆಫ್ಗಾನಿಸ್ತಾನ ಹೀನಾಯ ದಾಖಲೆಯೊಂದನ್ನು ಬರೆದಿದೆ.

ಐಸಿಸಿ ವಿಶ್ವಕಪ್ 2019: ಸರಣಿ ಸೋಲು, ಹೀನಾಯ ದಾಖಲೆ ಬರೆದ ಆಫ್ಘಾನಿಸ್ತಾನ!
ಸಂಗ್ರಹ ಚಿತ್ರ
Published On :
ಲಂಡನ್: ಐಸಿಸಿ ವಿಶ್ವಕಪ್ 2019ರಲ್ಲಿ ಒಂದೂ ಗೆಲುವು ಕಾಣದೆ ಟೂರ್ನಿ ಮುಕ್ತಾಯಗೊಳಿಸಿದ ಆಫ್ಗಾನಿಸ್ತಾನ ಹೀನಾಯ ದಾಖಲೆಯೊಂದನ್ನು ಬರೆದಿದೆ.
ಇಂದು ಲೀಡ್ಸ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲೂ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ 23ರನ್ ಗಳ ವಿರೋಚಿತ ಸೋಲು ಕಂಡಿತು. ಆ ಮೂಲಕ ತಾನಾಡಿದ 9 ಪಂದ್ಯಗಳಲ್ಲೂ ಆಫ್ಘಾನಿಸ್ತಾನ ಸೋಲು ಕಾಣುವ ಮೂಲಕ ಹೀನಾಯ ದಾಖಲೆ ಬರೆದಿದೆ.
ವಿಶ್ವಕಪ್ ಇತಿಹಾಸದಲ್ಲೇ ಆಫ್ಘಾನಿಸ್ತಾನ ಮೂರನೇ ಹೀನಾಯ ದಾಖಲೆ ಬರೆದಿದ್ದು, ವಿಶ್ವಕಪ್ ನಲ್ಲಿ ಸತತ 12 ಸೋಲುಕಂಡಿದೆ. ಹಾಲಿ ಟೂರ್ನಿಯಲ್ಲಿ 9 ಪಂದ್ಯ ಸೋತಿದ್ದು, ಇದಕ್ಕೂ ಮೊದಲು 2015ರ ವಿಶ್ವಕಪ್ ನಲ್ಲೂ ಕೊನೆಯ ಮೂರು ಪಂದ್ಯಗಳನ್ನು ಆಫ್ಗಾನಿಸ್ತಾನ ಸೋತಿತ್ತು. ಆ ಮೂಲಕ ವಿಶ್ವಕಪ್ ನಲ್ಲಿ ಗರಿಷ್ಠ ಸೋಲುಕಂಡ ತಂಡಗಳ ಪಟ್ಟಿಯಲ್ಲಿ ಆಫ್ಘಾನಿಸ್ತಾನ ಸತತ 12 ಪಂದ್ಯಗಳ ಸೋಲಿನ ಮೂಲಕ ಮೂರನೇ ಸ್ಖಾನದಲ್ಲಿದೆ.
ಇದಕ್ಕೂ ಮೊದಲು ಜಿಂಬಾಬ್ವೆ ತಂಡ 1983 ರಿಂದ 1992ರವರೆಗೆ ಸತತ 18 ಪಂದ್ಯಗಳನ್ನು ಸೋತು ಅಗ್ರಸ್ಥಾನದಲ್ಲಿದೆ. ಆ ಬಳಿಕದ ಸ್ಥಾನದಲ್ಲಿ ಸ್ಕಾಟ್ಲೆಂಡ್ ಇದ್ದು, 1999ರಿಂದ 2015ರವೆರೆಗೂ ಸತತ 14 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು ಸತತ 12 ಪಂದ್ಯಗಳ ಸೋಲಿನ ಮುಖಾಂತರ ಆಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದ್ದು, ಸತತ 11 ಸೋಲುಗಳ ಕಂಡಿರುವ ಕೆನಡಾ ತಂಡ ನಾಲ್ಕನೇ ಸ್ಥಾನದಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.