ಅಂಬಾಟಿ ರಾಯುಡು ನಿವೃತ್ತಿ: ಆಯ್ಕೆ ಸಮಿತಿ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ!
ಅಂಬಾಟಿ ರಾಯುಡು ನಿವೃತ್ತಿ ವಿಚಾರ ಭಾರತೀಯ ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ರಾಯುಡು ನಿವೃತ್ತಿ ಪರ-ವಿರೋಧ ಚರ್ಚೆಗಳ ನಡುವೆಯೇ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On :
ಲಂಡನ್: ಅಂಬಾಟಿ ರಾಯುಡು ನಿವೃತ್ತಿ ವಿಚಾರ ಭಾರತೀಯ ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ರಾಯುಡು ನಿವೃತ್ತಿ ಪರ-ವಿರೋಧ ಚರ್ಚೆಗಳ ನಡುವೆಯೇ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಮಹದಾಸೆ ಹೊಂದಿದ್ದ ಅಂಬಾಟಿ ರಾಯುಡು ತಂಡದ ಆಯ್ಕೆ ಬಳಿಕ ಆಯ್ಕೆ ಸಮಿತಿ ವಿರುದ್ಧ ಖುದ್ಧು ಹೋಗಿದ್ದರು. ಬಳಿಕ ತಂಡದಲ್ಲಿ ಸಾಲು ಸಾಲು ಆಟಗಾರರು ಗಾಯಗೊಂಡಾಗ ರಾಯುಡುಗೆ ಕರೆ ಬರಬಹುದು ಎಂದು ಭಾವಿಸಲಾಗಿತ್ತು. ಶಿಖರ್ ಧವನ್ ಗಾಯಗೊಂಡಾಗಲೇ ರಾಯುಡುಗೆ ಅವಕಾಶ ಸಿಗಬಹುದು ಎಂದು ಭಾವಿಸವಾಗಿತ್ತು. ಆದರೆ ವಿಜಯ್ ಶಂಕರ್ ಮತ್ತು ರಿಷಬ್ ಪಂತ್ ಗೆ ಬಿಸಿಸಿಐ ಬುಲಾವ್ ನೀಡಿತ್ತು. ಅಂತೆಯೇ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಆಗಮನದ ನಿರೀಕ್ಷೆ ಇತ್ತು. ಆದರೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು ಮತ್ತೆ ರಾಯುಡುಗೆ ನಿರಾಸೆಯಾಗಿದೆ. ಇದೇಕಾರಣಕ್ಕೆ ನೊಂದ ರಾಯುಡು ನಿವೃತ್ತಿಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಕೆಂಡ ಕಾರಿದ್ದು, ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಐಪಿಎಲ್ ಮತ್ತು ರಾಷ್ಟ್ರಕ್ಕಾಗಿ ಅಷ್ಟು ಉತ್ತಮವಾಗಿ ಆಡಿದ ಅವರಂತಹ ಕ್ರಿಕೆಟಿಗರು 3 ಶತಕ 10 ಅರ್ಧಶತಕವನ್ನು ಗಳಿಸಿದ್ದಾರೆ, ಮತ್ತು ಅದರ ಹೊರತಾಗಿಯೂ ಒಬ್ಬ ಆಟಗಾರ ನಿವೃತ್ತಿ ಹೊಂದಬೇಕಾದರೆ - ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ" ಎಂದು ಗಂಭೀರ್ ಹೇಳಿದ್ದಾರೆ.
ಇನ್ನು ಮುಂದುವರೆದು 'ಐದು ಆಯ್ಕೆದಾರರು ಸೇರಿದರೂ ರಾಯುಡು ಅವರು ತಮ್ಮ ವೃತ್ತಿಜೀವನದಲ್ಲಿ ಗಳಿಸಿದಷ್ಟು ರನ್ ಸಾಧ್ಯವಾಗುತ್ತಿರಲಿಲ್ಲ. ಈ ನಿವೃತ್ತಿಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ರಾಯುಡು ಅವರ ಸ್ಥಾನದಲ್ಲಿದ್ದರೆ ಯಾರಿಗೆ ಅದರೂ ಅಷ್ಟೇ ಕೆಟ್ಟವೆನಿಸುತ್ತು ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್ಭಾರತAmbati Rayuduನಿವೃತ್ತಿGautam Gambhirಗೌತಮ್ ಗಂಭೀರ್ಅಂಬಾಟಿ ರಾಯುಡುICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


