ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ ಪೂಜಾರ, ಜಂಟಲ್ಮ್ಯಾನ್ ಗೇಮ್ಗೆ ಅವಮಾನ!
ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.

Published On :
ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್ನಲ್ಲೇ ನಿಂತಿದ್ದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್ಮ್ಯಾನ್ ಗೇಮ್ಗೆ ಮೋಸ ಮಾಡಿದ್ದಾರೆ.
ಎರನಡೇ ಇನ್ನಿಂಗ್ಸ್ನಲ್ಲಿ 34ರನ್ ಗಳಿಸಿದ್ದ ಪೂಜಾರ ವಿನಯ್ ಕುಮಾರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಎಸ್. ಶರತ್ಗೆ ಕ್ಯಾಚ್ ನೀಡಿದ್ದರು. ಬ್ಯಾಟ್ಗೆ ಚೆಂಡು ತಾಗಿದ್ದು ಗೊತ್ತಿದ್ದರೂ ಪೂಜಾರ ಕ್ರೀಸ್ನಲ್ಲೇ ನಿಂತುಕೊಂಡರು. ಇನ್ನೂ ಅಂಪೈರ್ ಕೂಡ ಔಟ್ ತೀರ್ಪು ನೀಡದೆ ಇರುವುದು ಪೂಜಾರ ಮೋಸಾದಾಟಕ್ಕೆ ಸಾಥ್ ಕೊಡುವಂತಿತ್ತು.. ಅಂಪೈರ್ ಔಟ್ ಕೊಡದಿದ್ದಕ್ಕೆ ಕೋಪಗೊಂಡ ವಿನಯ್ ವಾಗ್ವಾದವನ್ನು ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕರಣಜಿ ಟ್ರೋಫಿRanji TrophyCheteshwar Pujaraಚೇತೇಶ್ವರ ಪೂಜಾರCricket Offbeatಕ್ರಿಕೆಟ್ ಸ್ವಾರಸ್ಯsportsmanshipಕ್ರೀಡಾಸ್ಫೂರ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


