ಕ್ರಿಕೆಟ್

ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ

ಅಡಿಲೇಡ್ ನಲ್ಲಿ ಜ.15 ರಂದು ನಡೆದ ಭಾರತ-ಆಸ್ಟ್ರೇಲಿಯಾ ತಂಡದ 2ನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಾಟರ್ ಬಾಯ್ ಮೇಲೆ ಕೋಪಗೊಂಡ ಘಟನೆ ನಡೆದಿದೆ.

ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ
ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ
Published On :
ಅಡಿಲೇಡ್: ಅಡಿಲೇಡ್ ನಲ್ಲಿ ಜ.15 ರಂದು ನಡೆದ ಭಾರತ-ಆಸ್ಟ್ರೇಲಿಯಾ ತಂಡದ 2ನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಾಟರ್ ಬಾಯ್ ಮೇಲೆ ಕೋಪಗೊಂಡ ಘಟನೆ ನಡೆದಿದೆ. 
ಬಿಸಿಲು ಹೆಚ್ಚಿದ್ದಿದ್ದರಿಂದ ಕೊನೆಯ ಓವರ್ ಗಳಲ್ಲಿ ಭಾರತದ ಬ್ಯಾಟ್ಸ್ಮನ್ ಗಳು ತಂಪುಪಾನೀಯ ಕುಡಿಯಲು ವಿರಾಮ ತೆಗೆದುಕೊಂಡಿದ್ದರು. ಎಂಥಹ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿದ್ದ ಧೋನಿ ಆ ಸಂದರ್ಭದಲ್ಲಿ ತೀವ್ರ ಸಿಡಿಮಿಡಿಗೊಂಡಿದ್ದು ಅಚ್ಚರಿ ಉಂಟುಮಾಡಿತ್ತು. ವಿರಾಮದ ವೇಳೆ ತಂಪುಪಾನೀಯ ತಂದಿದ್ದ ವಾಟರ್ ಬಾಯ್ ಪಿಚ್ ಮೇಲೆ ನಡೆದಿದ್ದನ್ನು ಗಮನಿಸಿದ ಧೋನಿ  ತೀವ್ರವಾಗಿ ಆಕ್ರೋಶಗೊಂಡು ನಿಂದಿಸಿರುವ ವಿಡಿಯೋ ಈಗ ವೈರಲ್ ಆಗತೊಡಗಿದೆ. 
ಲೆಫ್ಟ್ ಆರ್ಮ್ ಪೇಸರ್ ಖಲೀಲ್ ಅಹ್ಮದ್ ಪಿಚ್ ಮೇಲೆ ನಡೆದಿದೆ. ಸಾಮಾನ್ಯವಾಗಿ ಪಿಚ್ ನ ಮತ್ತೊಂದು ಬದಿಗೆ ತೆರಳಬೇಕಾದರೆ ಯಾರೂ ಪಿಚ್ ಮೇಲೆ ನಡೆದು ಹೋಗಬಾರದೆಂಬ ಎಂಬ ನಿಯಮವಿದೆ. ಆದರೆ ಖಲೀಲ್ ಅಹ್ಮದ್ ಪಿಚ್ ಮೇಲೆ ನಡೆದು ಹೋಗಿದ್ದನ್ನು ಕಂಡ ಧೋನಿ ತಾಳ್ಮೆ ಕಳೆದುಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.