ನನ್ನ ಮುಂದಿನ ಮಕ್ಕಳಿಗೆ ತಂದೆಯಾಗ್ತೀರಾ:ಜಿಮ್ಮಿ ನಿಶಾಮ್ ಗೆ ಪಾಕ್ ನಟಿ ಪ್ರಪೋಸ್!
ನನ್ನ ಭವಿಷ್ಯದ ಮಕ್ಕಳಿಗೆ ತಂದೆಯಾಗ್ತೀರಾ ಎಂದು ನ್ಯೂಜಿಲೆಂಡ್ ಆಲ್ ರೌಂಡರ್ ಜಿಮ್ಮಿ ನಿಶಾಮ್ ಅವರನ್ನು ಪಾಕಿಸ್ತಾನದ ನಟಿಯೊಬ್ಬರು ಪ್ರಪೋಸ್ ಮಾಡಿದ್ದಾರೆ.

ವೆಲ್ಲಿಂಗ್ಟನ್: ನನ್ನ ಭವಿಷ್ಯದ ಮಕ್ಕಳಿಗೆ ತಂದೆಯಾಗ್ತೀರಾ ಎಂದು ನ್ಯೂಜಿಲೆಂಡ್ ಆಲ್ ರೌಂಡರ್ ಜಿಮ್ಮಿ ನಿಶಾಮ್ ಅವರನ್ನು ಪಾಕಿಸ್ತಾನದ ನಟಿಯೊಬ್ಬರು ಪ್ರಪೋಸ್ ಮಾಡಿದ್ದಾರೆ.
ಜಿಮ್ಮಿ ನಿಶಾಮ್ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಮಯಕ್ಕೆ ಹೆಸರುವಾಸಿಯಾಗಿದ್ದಾರೆ.ಕ್ರಿಕೆಟ್ ಹಾಗೂ ಕ್ರಿಕೆಟ್ ಯೇತರ ವಿಷಯಗಳನ್ನು ಆಗಾಗಲ್ಲೆ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಮೊನ್ನೆ ಪಾಕಿಸ್ತಾನದ ನಟಿಯೊಬ್ಬರಿಂದ ಅಸಾಮಾನ್ಯವಾದಂತಹ ಮನವಿಯೊಂದು ಬಂದಿದೆ.
ಎಲ್ ಎ ವಿಮಾನ ನಿಲ್ದಾಣದ ಮೂಲಕ ಕೆಲ ಬಾರಿ ಪ್ರಯಾಣಿಸಿದ್ದಕ್ಕಾಗಿ ಧನ್ಯವಾದಗಳು, ನರಕದಲ್ಲಿ ಅನುಭವಿಸಬೇಕಾದ ಯಾತನೆಯನ್ನು ಸ್ವಲ್ಪ ಇಲ್ಲೇ ಅನುಭವಿಸಿರುವುದಾಗಿ ನಿಶಾಮ್ ಟ್ವೀಟ್ ಮಾಡಿದ್ದರು.ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ನಟಿ ಸೆಹರ್ ಶಿನ್ ವಾರಿ, ಎಮೋಜಿಯೊಂದಿಗೆ ನನ್ನ ಭವಿಷ್ಯದ ಮಕ್ಕಳಿಗೆ ತಂದೆಯಾಗುವಿರಾ? ಎಂದು ಕೇಳಿಕೊಂಡಿದ್ದಾಳೆ.
ಕೂಡಲೇ ಪ್ರತಿಕ್ರಿಯಿಸಿರುವ ನಿಶಾಮ್, ಎಮೋಜಿಗಳ ಅಗತ್ಯವಿರುವುದಿಲ್ಲ ಎಂದಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಕೆನಡಾ ಗ್ಲೋಬಲ್ ಟಿ-20ಯಲ್ಲಿ ಎಡ್ಮೊಂಟನ್ ರಾಯಲ್ಸ್ ಪರವಾಗಿ ನಿಶಾಮ್ ಆಟವಾಡಿದ್ದರು. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲೂ ನಿಶಾಮ್ ಮಿಂಚಿದ್ದರು.
ಸೂಪರ್ ಓವರ್ ಪಂದ್ಯದಲ್ಲೂ ಇಂಗ್ಲೆಂಡ್ ನಷ್ಟೇ 15 ರನ್ ಗಳ ಮೊತ್ತವನ್ನು ಕಿವೀಸ್ ಕಲೆಹಾಕುವಲ್ಲಿ ನಿಶಾಮ್ ಪ್ರಮುಖವಾದ ಕೊಡುಗೆ ನೀಡಿದ್ದರು. ಆದರೂ, ಅತಿ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


