ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್, ನಕ್ಕ ಕೊಹ್ಲಿ ಇಶಾಂತ್ ಜೊತೆ ವಾಗ್ವಾದ, ವಿಡಿಯೋ ವೈರಲ್!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಈ ಮಧ್ಯೆ ಪಂದ್ಯದ ವೇಳೆ ಪಿಚ್ ಕ್ಯಾಚ್ ಹಿಡಿದು...

Published On :
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಈ ಮಧ್ಯೆ ಪಂದ್ಯದ ವೇಳೆ ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್ ಪಂತ್ ರ ಉಪಟಳ ನೋಡಿ ತಂಡದ ನಾಯಕ ವಿರಾಟ್ ಕೊಹ್ಲಿ ನಕ್ಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಇಶಾಂತ್ ಬೌಲಿಂಗ್ ನಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದು ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ಕೀಪರ್ ಕಡೆ ಹೋಯಿತು. ಈ ವೇಳೆ ರಿಷಬ್ ಪಂತ್ ಡೈವ್ ಮಾಡಿ ಕ್ಯಾಚ್ ಹಿಡಿದು ಅಪೀಲ್ ಮಾಡಿದರು. ಆದರೆ ವಿರಾಟ್ ಕೊಹ್ಲಿ ಮಾತ್ರ ಇದು ಪಿಚ್ ಕ್ಯಾಚ್ ಎಂದು ಅಲ್ಲೇ ನಿಂತರು. ಇದರಿಂದ ಅಂಪೈರ್ ಪರೀಕ್ಷಿಸಲು ಮೂರನೇ ಅಂಪೈರ್ ಗೆ ಮನವಿ ಮಾಡಿದರು.
ಅಷ್ಟರಲ್ಲಿ ಬೌಲರ್ ಇಶಾಂತ್ ಕೊಹ್ಲಿ ಬಳಿ ಔಟ್ ಎಂದು ವಾದಿಸಲು ಬಂದರು. ಆಗ ಕೊಹ್ಲಿ ಇಲ್ಲ ಅದು ಪಿಚ್ ಕ್ಯಾಚ್ ಎಂದು ಹೇಳಲು ಮುಂದಾದರೂ. ಆದರೆ ಈ ವೇಳೆ ಇಶಾಂತ್ ಸುಮ್ಮನಾಗಲ್ಲಿಲ್ಲ. ಇನ್ನು ಮೂರನೇ ಅಂಪೈರ್ ವಿಡಿಯೋ ಪರಿಶೀಲಿಸುವ ದೃಶ್ಯ ಮೈದಾನದಲ್ಲಿ ಅಳವಡಿಸಿದ್ದ ಡಿಸ್ಲೈಯಲ್ಲಿ ಮೂಡಿಬಂದಿತು. ಆಗ ಮೊದಲಿಗೆ ಚೆಂಡು ನೆಲಕ್ಕೆ ತಾಗಿ ನಂತರ ರಿಷಬ್ ಕೈಸೇರಿರುವುದು ತಿಳಿದುಬಂದು ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿIshant Sharmaಇಶಾಂತ್ ಶರ್ಮಾRishabh PantCricket Offbeatಕ್ರಿಕೆಟ್ ಸ್ವಾರಸ್ಯರಿಷಬ್ ಪಂತ್IPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


