ಚೆನ್ನೈ ವಿರುದ್ಧ ಆರ್‌ಸಿಬಿಗೆ 1 ರನ್ ರೋಚಕ ಗೆಲುವಿಗೆ ಪಂಜಾಬ್ ನಾಯಕ ಅಶ್ವಿನ್ ಕಾರಣ? ಅದು ಹೇಗೆ ಅಂತೀರಾ?
ಚೆನ್ನೈ ವಿರುದ್ಧ ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮೊನ್ನೆ ನಡೆದ ಪಂದ್ಯದಲ್ಲಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.

Published On :
ಬೆಂಗಳೂರು: ಚೆನ್ನೈ ವಿರುದ್ಧ ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮೊನ್ನೆ ನಡೆದ ಪಂದ್ಯದಲ್ಲಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು. ಅದಕ್ಕೆ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಕಾರಣ ಎಂಬ ಚರ್ಚೆ ಶುರುವಾಗಿದೆ.
ಹೌದು, ಪಂದ್ಯದ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ರನ್ನು ಆರ್‌ಸಿಬಿ ಕೀಪರ್ ಪಾರ್ಥಿವ್ ಪಟೇಲ್ ರನೌಟ್ ಮಾಡಿದ್ದರು. ಇದರೊಂದಿಗೆ ಆರ್‌ಸಿಬಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.
ಈ ರೋಚಕ ಗೆಲುವಿಗೆ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರು. ಆ ಬಳಿಕ ನಾನ್ ಸ್ಟ್ರೈಕ್ ನಲ್ಲಿದ್ದ ಆಟಗಾರರು ಬೇಗನೆ ಕ್ರಿಸ್ ಬಿಡುವುದನ್ನು ಬಿಟ್ಟಿದ್ದಾರೆ. ಬೌಲರ್ ಬೌಲಿಂಗ್ ಮಾಡಿದ ನಂತರ ನಾನ್ ಸ್ಟ್ರೈಕ್ ಆಟಗಾರರು ರನ್ ಓಡಲು ಮುಂದಾಗುತ್ತಿದ್ದು ಇದೇ ಕಾರಣ ಎಂಬ ವಿವರಣೆಯನ್ನು ಮುಂದಿಟ್ಟುಕೊಂಡು ಕ್ರಿಕೆಟ್ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ಕೊನೆಯ ಓವರ್ ನ ಅಂತಿಮ ಎಸೆತದಲ್ಲಿ ಚೆನ್ನೈಗೆ ಗೆಲ್ಲಲು 2 ರನ್ ಬೇಕಿತ್ತು. ಈ ವೇಳೆ ಧೋನಿ ಚೆಂಡನ್ನು ಮಿಸ್ ಮಾಡಿದ್ದರಿಂದ ಚೆಂಡು ನೇರವಾಗಿ ಕೀಪರ್ ಪಾರ್ಥಿವ್ ಪಟೇಲ್ ಕೈಸೇರಿತ್ತು. ಈ ವೇಳೆ 1 ರನ್ ತೆಗೆದುಕೊಂಡು ಪಂದ್ಯವನ್ನು ಡ್ರಾ ಮಾಡಲು ಧೋನಿ ಯತ್ನಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಲೇಟಾಗಿ ಕ್ರೀಸ್ ಬಿಟ್ಟಿದ್ದರಿಂದ ಕೇವಲ 16 ಸೆ.ಮೀ ಅಂತರದಲ್ಲಿ ಪಾರ್ಥಿವ್ ರನೌಟ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿMS DhoniCSKಎಂಎಸ್ ಧೋನಿRCBಆರ್‌ಸಿಬಿR Ashwinಪಾರ್ಥಿವ್ ಪಟೇಲ್ಸಿಎಸ್ಕೆParthiv PatelCricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019ಆರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


