2007ರಲ್ಲಿ ಪುಟ್ಟ ಬಾಲಕ ಧೋನಿ ಅಭಿಮಾನಿ, ಇದೀಗ ಮಾಹೀಗೆ ಟಕ್ಕರ್ ಕೊಡಲು ಬಂದ!
2007ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಪಂದ್ಯದ ವೇಳೆ 6 ವರ್ಷದ ಬಾಲಕ ಟೀಂ ಇಂಡಿಯಾ ನಾಯಕನಾಗಿದ್ದ ಎಂಎಸ್ ಧೋನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದರು.

Published On :
2007ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಪಂದ್ಯದ ವೇಳೆ 6 ವರ್ಷದ ಬಾಲಕ ಟೀಂ ಇಂಡಿಯಾ ನಾಯಕನಾಗಿದ್ದ ಎಂಎಸ್ ಧೋನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದರು. ಇದೀಗ 12 ವರ್ಷಗಳ ಬಳಿಕ ರಾಜಸ್ತಾನ ರಾಯಲ್ಸ್ ತಂಡದೊಂದಿಗೆ ಆಡುವ ಮೂಲಕ ಧೋನಿಗೆ ಟಕ್ಕರು ಕೊಡಲು ಬಂದಿದ್ದಾನೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಪರ 17 ವರ್ಷದ ರಿಯಾನ್ ಪರಾಗ್ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದರು. ಈ ಮೂಲಕ ಅಂದು ಅಭಿಮಾನಿಯಾಗಿದ್ದ ಬಾಲಕ ಇಂದು ಎದುರಾಳಿಯಾಗಿದ್ದಾನೆ.
37 ವರ್ಷದ ಎಂಎಸ್ ಧೋನಿ 2004ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವಾಗ ಪರಾಗ್ ಗೆ ಕೇವಲ 3 ವರ್ಷ. ಈಗ ಆತ ಧೋನಿಗೆ ಎದುರಾಳಿಯಾಗಿರುವುದಕ್ಕೆ ನೆಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇನ್ನು ಮೊದಲ ಪಂದ್ಯದಲ್ಲೇ 16 ರನ್ ಗಳಿಸಿದ್ದ ಪರಾಗ್ ರನ್ನು ಎಂಎಸ್ ಧೋನಿ ಕ್ಯಾಚ್ ಹಿಡಿಯುವ ಮೂಲಕ ಔಟ್ ಮಾಡಿದ್ದರು. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 2 ರನ್ ಕದಿಯುವ ಮೂಲಕ ಚೆನ್ನೈ ಗೆಲುವಿನ ನಗೆ ಬೀರಿತ್ತು.
ಇದೀಗ ಹಳೆಯ ಫೋಟೋ ಜೊತೆಗೆ ಪರಾಗ್ ಧೋನಿ ಜತೆಗಿನ ಹೊಸ ಫೋಟೋವನ್ನು ಕ್ಲಬ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡಲಾಗಿದೆ.
From fan boy moment to bowling against MS Dhoni. What a Journey for young lad!
Riyan Parag
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


