ಜಡೇಜಾ ಅನಿರೀಕ್ಷಿತ ಸಿಕ್ಸರ್‌ಗೆ ಧೋನಿ ಅವಾಕ್, ಬ್ಯಾಟ್‍ನಿಂದ ಜಡ್ಡು ತಲೆಗೆ ಹೊಡೆದ ಮಾಹೀ, ವಿಡಿಯೋ ವೈರಲ್!
ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅನಿರೀಕ್ಷಿತವಾಗಿ ಸಿಡಿಸಿದ ಸಿಕ್ಸರ್ ಕಂಡು ಎಂಎಸ್ ಧೋನಿ ಅವಾಕ್...

Published On :
ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅನಿರೀಕ್ಷಿತವಾಗಿ ಸಿಡಿಸಿದ ಸಿಕ್ಸರ್ ಕಂಡು ಎಂಎಸ್ ಧೋನಿ ಅವಾಕ್ ಆಗಿದ್ದು ಬಳಿಕ ತಮ್ಮ ಬ್ಯಾಟ್‍ನಿಂದ ಜಡ್ಡು ತಲೆಗೆ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕೊನೆಯ ಓವರ್ ನಲ್ಲಿ ಚೆನ್ನೈ ತಂಡಕ್ಕೆ 18 ರನ್ ಗಳ ಅವಶ್ಯಕತೆ ಇತ್ತು. ಈ ವೇಳೆ ಮೊದಲ ಎಸೆತದಲ್ಲೇ ಜಡೇಜಾ ಬೆನ್ ಸ್ಟೋಕ್ಸ್ ಎಸೆತದಲ್ಲಿ ಬ್ಯಾಲೆನ್ಸ್ ತಪ್ಪಿ ಬೀಳುವ ಸಮಯದಲ್ಲಿ ಸಿಕ್ಸರ್ ಸಿಡಿಸಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಧೋನಿ ಖುಷಿಯಿಂದ ಬಂದು ಜಡೇಜಾ ತಲೆಗೆ ಬ್ಯಾಟ್ ನಿಂದ ಹೊಡೆದರು.
ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯ ಓವರ್ ನಲ್ಲಿ 21 ರನ್ ಗಳನ್ನು ಪೇರಿಸುವ ಮೂಲಕ ಭರ್ಜರಿ ಜಯ ಗಳಿಸಿತ್ತು. ಇದರೊಂದಿಗೆ ನಾಯಕತ್ವದಲ್ಲಿ ಧೋನಿ ಚೆನ್ನೈ ತಂಡವನ್ನು 100ನೇ ಗೆಲುವು ಗಳಿಸಿದ ತಂಡವನ್ನಾಗಿಸಿದ್ದಾರೆ.
HIT LIKE IF YOU LOVED THIS SIR JADEJA MOMENT
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS DhoniCSKಎಂಎಸ್ ಧೋನಿRavindra Jadejaರವೀಂದ್ರ ಜಡೇಜಾಸಿಎಸ್ಕೆCricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


