ಪತ್ನಿ ಜೊತೆ ಏರ್ಪೋರ್ಟ್ನ ನೆಲದ ಮೇಲೆ ಮಲಗಿದ ಧೋನಿ, ನೆಟಿಗರ ಪ್ರಶಂಸೆ!
ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರು ಸಹ ಸಾಮಾನ್ಯನಂತೆ ಇರಲು ಇಷ್ಟಪಡುವುದಿಲ್ಲ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ...

Published On :
ಚೆನ್ನೈ: ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರು ಸಹ ಸಾಮಾನ್ಯನಂತೆ ಇರಲು ಇಷ್ಟಪಡುವುದಿಲ್ಲ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿದ್ದು ಧೋನಿಗೆ ನೆಟಿಗರು ಜೋಹಾರ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ಪಂದ್ಯದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈ ನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಬೇಗನೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎಂಎಸ್ ಧೋನಿ ಹಾಗೂ ಪತ್ನಿ ಸಾಕ್ಷಿ ಇಬ್ಬರು ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದರು.
ಐಪಿಎಲ್ ಪಂದ್ಯಗಳು ತಡರಾತ್ರಿವರೆಗೂ ನಡೆಯುವುದರಿಂದ ಆಟಗಾರರು ತಡವಾಗಿ ಮಲಗುತ್ತಾರೆ. ಆದರೆ ಮುಂದಿನ ಪಂದ್ಯಕ್ಕೆ ಬೇರೆಡೆ ತೆರಳಬೇಕಾದ ಕಾರಣ ಮತ್ತೆ ಬೆಳಗ್ಗೆ ಬಹುಬೇಗ ಎದ್ದು ತೆರಳುತ್ತಾರೆ. ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಆಟಗಾರರು ಫಿಟ್ನೆಸ್ ಕಾಯ್ದಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಚೆನ್ನೈನ ತಂಡ ಮುಂದಿನ ಪಂದ್ಯ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿದೆ. ಈ ಹಿಂದೆಯೂ ಕೂಡ ಧೋನಿ ತಮಗೆ ಸಿಕ್ಕ ವಿರಾಮ ಸಮಯವನ್ನು ವ್ಯರ್ಥ ಮಾಡದೇ ವಿಶ್ರಾಂತಿ ಪಡೆದುಕೊಳ್ಳುವ ಮೂಲಕ ಮುಂದಿನ ಪಂದ್ಯದ ತಯಾರಿಗೆಬೇಕಾದ ಸಮಯವನ್ನು ನಿರ್ವಹಿಸುತ್ತಿದ್ದರು. ಹಲವು ಸಂದರ್ಭದಲ್ಲಿ ಪಂದ್ಯದ ನಡುವೆ ಮೈದಾನದಲ್ಲೇ ಮಲಗಿಕೊಂಡು ವಿಶ್ರಾಂತಿ ಪಡೆಯುವ ಮೂಲಕ ಗಮನ ಸೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


