ಅದೃಷ್ಟ ಅಂದ್ರೆ ಇದೇ ಅಲ್ವಾ.. ಚೆಂಡು ವಿಕೆಟ್ ಗೆ ತಾಗಿದರೂ ಕೆಎಲ್ ರಾಹುಲ್ ನಾಟೌಟ್!
ಈ ಹಿಂದೆ ಚೆಂಡು ವಿಕೆಟ್ ಗೆ ತಾಗಿದರೂ ಎಂಎಸ್ ಧೋನಿ ಅಚ್ಚರಿ ರೀತಿಯಲ್ಲಿ ನಾಟೌಟ್ ಆಗಿದ್ದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಅದೇ ತೆರನಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟ್ಸಮನ್ ಕೆಎಲ್ ರಾಹುಲ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

Published On :
ಚೆನ್ನೈ: ಈ ಹಿಂದೆ ಚೆಂಡು ವಿಕೆಟ್ ಗೆ ತಾಗಿದರೂ ಎಂಎಸ್ ಧೋನಿ ಅಚ್ಚರಿ ರೀತಿಯಲ್ಲಿ ನಾಟೌಟ್ ಆಗಿದ್ದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಅದೇ ತೆರನಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬ್ಯಾಟ್ಸಮನ್ ಕೆಎಲ್ ರಾಹುಲ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಹೌದು... ಇಂದು ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಚೆನ್ನೈ 22 ರನ್ ಗಳ ಜಯ ಪಡೆದಿದ್ದು, ಸಿಎಸ್‍ಕೆ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ಪಂಜಾಬ್ ಸೋಲು ಕಂಡಿತು. ಇದಕ್ಕೂ ಮುನ್ನ ಇದೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅಚ್ಚರಿಯ ರೀತಿಯಲ್ಲಿ ರನೌಟ್ ನಿಂದ ಪಾರಾಗಿದ್ದರು.
ಪಂದ್ಯದ 13ನೇ ಓವರ್ ನಲ್ಲಿ ಕೆಎಲ್ ರಾಹುಲ್ ಸ್ಟ್ರೈಕ್ ಎದುರಿಸಿ ಜಡೇಜಾ ಬೌಲಿಂಗ್ ನಲ್ಲಿ ರನ್ ಕದಿಯುವ ಯತ್ನ ಮಾಡಿದರು. ಈ ವೇಳೆ ವಿಕೆಟ್ ಹಿಂದಿದ್ದ ಧೋನಿ ತಕ್ಷಣ ಚೆಂಡು ಪಡೆದು ತಮ್ಮದೇ ರೀತಿಯಲ್ಲಿ ರನೌಟ್ ಮಾಡಲು ಯತ್ನಿಸಿದರು. ಆದರೆ ಧೋನಿ ಎಸೆದ ಚೆಂಡು ವಿಕೆಟ್ ಗೆ ತಾಕಿದರೂ ಕೂಡ ಬೇಲ್ಸ್ ಹಾರದ ಪರಿಣಾಮ ರನೌಟ್ ನಿಂದ ರಾಹುಲ್ ಬಚಾವ್ ಆದರು. ಈ ಹಿಂದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೂಡ ಬೌಲ್ಡ್ ಆಗಿದ್ದರು. ಆದರೆ ವಿಕೆಟ್ ನಿಂದ ಬೇಲ್ಸ್ ಹಾರದ ಕಾರಣ ನಾಟೌಟ್ ಆಗಿದ್ದರು.
WATCH: Déjà vu - Dhoni creates magic, but bails still don't fall
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್MS DhoniChennaiಚೆನ್ನೈKL Rahulಎಂಎಸ್ ಧೋನಿChennai Super Kingsಚೆನ್ನೈ ಸೂಪರ್ ಕಿಂಗ್ಸ್Kings XI Punjabಕಿಂಗ್ಸ್ ಇಲೆವೆನ್ ಪಂಜಾಬ್IPL 2019ಐಪಿಎಲ್ 2019ಕೆಎಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


