ಆರ್‌ಸಿಬಿ ಸತತ ಸೋಲು: ವಿಶ್ವಕಪ್ನಲ್ಲೂ ಕೊಹ್ಲಿ ನೇತೃತ್ವದ ತಂಡ ಮಕಾಡೆ ಮಲಗಲಿದೆ; ಕೆಆರ್ ಖಾನ್
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್‌ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್ನಲ್ಲೂ ತಂಡ ಮಕಾಡೆ ಮಲಗಲಿದೆ...

Published On :
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆರ್‌ಸಿಬಿ ತಂಡ ಸತತ ಸೋಲು ಕಂಡಿದೆ. ಇದೀಗ ವಿರಾಟ್ ಕೊಹ್ಲಿಯ ನಾಯಕತ್ವದ ಕುರಿತು ಪ್ರಶ್ನೆ ಮೂಡಿಸಿದ್ದು ವಿಶ್ವಕಪ್ನಲ್ಲೂ ತಂಡ ಮಕಾಡೆ ಮಲಗಲಿದೆ ಎಂದು ಬಾಲಿವುಡ್ ನಟ ಕಮಾಲ್ ಆರ್ ಖಾನ್ ತೆಗೆದುಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದಿಂದ ಕೋಪಗೊಂಡಿರುವ ಕಮಾಲ್ ಖಾನ್ ವಿರಾಟ್ ಕೊಹ್ಲಿ ಕಳಪೆ ಕಪ್ತಾನ. ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಜಯ ದಾಖಲಿಸದ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಭಾಗದಲ್ಲಿದೆ. ಇದು ಕೊಹ್ಲಿಯ ನಾಯಕತ್ವದ ಮಟ್ಟವನ್ನು ತೋರಿಸುತ್ತದೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದರೆ ತಂಡ ಸೆಮಿ ಫೈನಲ್ ಕೂಡ ಪ್ರವೇಶಿಸುವುದಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂದು ಕಮಾಲ್ ಖಾನ್ ಭವಿಷ್ಯ ನುಡಿದಿದ್ದಾರೆ. ಕಮಾಲ್ ಖಾನ್ ಟ್ವೀಟ್ ಗೆ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿRCBಆರ್‌ಸಿಬಿKamaal R Khanಕಮಾಲ್ ಆರ್ ಖಾನ್IPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


