ಪಾಕ್ ಗೆಲುವನ್ನು 'ಮಧ್ಯದ ಬೆರಳು' ತೋರಿಸಿ ವಿಕೃತಿ ಮೆರೆದ ಪಾಕ್ ಆ್ಯಂಕರ್, ನೆಟಿಗರಿಂದ ಆಕ್ರೋಶ!
ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬಿಗುವುದು ಸಾಮಾನ್ಯ. ಆದರೆ ಪಾಕಿಸ್ತಾನ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿರುವ...

Published On :
ಇಸ್ಲಾಮಾಬಾದ್: ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬಿಗುವುದು ಸಾಮಾನ್ಯ. ಆದರೆ ಪಾಕಿಸ್ತಾನ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾ ದೇಶ ವಿರುದ್ಧ 3 ವಿಕೆಟ್ ಗಳಿಂದ ಜಯ ಗಳಿಸಿತ್ತು. ಈ ವೇಳೆ ತಮ್ಮ ದೇಶದ ಆಟಗಾರರ ಗೆಲುವನ್ನು ನ್ಯೂಸ್ ಬುಲೆಟಿನ್ ನಲ್ಲಿ ಹೇಳುತ್ತಿದ್ದಾಗ ಆ್ಯಂಕರ್ ಅಸಭ್ಯವಾಗಿ ಸನ್ನೆ ಮಾಡಿದ್ದಾರೆ.
ಪಾಕ್ ಟಿವಿ ಚಾನೆಲ್ ವೊಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಈ ವೇಳೆ ಮಹಿಳಾ ಆ್ಯಂಕರ್ ಜೊತೆಗೆ ಕುಳಿತಿದ್ದ ಆ್ಯಂಕರ್, ತಮ್ಮ ಎರಡೂ ಕೈಗಳ ಮಧ್ಯದ ಬೆರಳು ತೋರಿಸಿ, ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಪಾಕ್ ತಂಡದ ಸಾಧನೆಯ ಸುದ್ದಿಯನ್ನು ನಗುತ್ತಲೆ ಹೇಳಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋ ಕಂಡ ನೆಟಿದರು ಆ್ಯಂಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
When panel producer is in so much hurry to switch!!! RIP Journalism
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನಬಾಂಗ್ಲಾದೇಶBangladeshcameraಕ್ಯಾಮೆರಾNews ReaderAsia Cup 2018ಏಷ್ಯಾಕಪ್ 2018ಸುದ್ದಿ ವಾಚಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


