ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ಸರದಾರನಾಗಿ ಮಿಂಚುತ್ತಿದ್ದಾರೆ. ಈ ಮಧ್ಯೆ ಕೊಹ್ಲಿಯ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ...

Published On :
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ಸರದಾರನಾಗಿ ಮಿಂಚುತ್ತಿದ್ದಾರೆ. ಈ ಮಧ್ಯೆ ಕೊಹ್ಲಿಯ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ.
ವಿರಾಟ್ ಕೊಹ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟರ್ ವೊಂದನ್ನು ಹಂಚಿಕೊಂಡಿದ್ದು ಕೊಹ್ಲಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆಯೇ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಸಿದೆ.
ಇನ್ನು ಪೋಸ್ಟರ್ ನಲ್ಲಿ ವಿರಾಟ್ ಕೊಹ್ಲಿ ಸೂಪರ್ ಹೀರೋ ರೀತಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದಾರೆ. ಇದು ಸಿನಿಮಾ ಪೋಸ್ಟರಾ, ಯಾವುದಾದರೂ ಜಾಹೀರಾತು ಅಥವಾ ಕಿರುಚಿತ್ರಕ್ಕೆ ಸಂಬಂಧಿಸಿದ್ದಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ಈ ಪೋಸ್ಟರ್ ನ ಸತ್ಯಾಸತ್ಯತೆ ತಿಳಿಯಬೇಕಾದರೇ ಸೆಪ್ಟೆಂಬರ್ 28ರವರೆಗೆ ಕಾಯಬೇಕು. ಏಕೆಂದರೆ ಅಂದೇ ಟ್ರೇಲರ್ ರಿಲೀಸ್ ಆಗುತ್ತಿದ್ದು ವಿರಾಟ್ ಕೊಹ್ಲಿಯ ಮತ್ತೊಂದು ಮುಖ ಅನಾವರಣ ಆಗಲಿದೆ.
ಕ್ರಿಕೆಟ್ ನಲ್ಲಿ ತಮ್ಮ ಅಪ್ರತಿಮ ಆಟದಿಂದಾಗಿ ವಿರಾಟ್ ಕೊಹ್ಲಿ ಜಾಹೀರಾತು ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಗಾಲೇ ಸಾಕಷ್ಟು ಜಾಹೀರಾತುಗಳಲ್ಲಿ ಬಣ್ಣ ಹಚ್ಚಿದ್ದಾರೆ.
Another debut after 10 years, can't wait!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್Anushka Sharmaಅನುಷ್ಕಾ ಶರ್ಮಾVirat Kohliವಿರಾಟ್ ಕೊಹ್ಲಿಟ್ರೈಲರ್trailerSui Dhaagaಸೂಯಿ ಧಾಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


