ಇಂತಹ ಜೋಡಿ ಎದುರು 400 ರನ್ ಗಳ ಬೃಹತ್ ಗುರಿ ನೀಡಿದರೂ ವಿಂಡೀಸ್ ಗೆಲ್ಲುವುದು ಕಷ್ಟ: ಬ್ರಿಯಾನ್ ಲಾರಾ
ಭಾರತದ ಈ ಜೋಡಿ ಎದುರು ವಿಂಡೀಸ್ ತಂಡ 400 ರನ್ ಗಳ ಬೃಹತ್ ಗುರಿ ನೀಡಿದರೂ ಗೆಲ್ಲುವುದು ಕಷ್ಟ ಎಂದು ಕೆರಿಬಿಯನ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಹೇಳಿದ್ದಾರೆ.

Published On :
ನವದೆಹಲಿ: ಭಾರತದ ಈ ಜೋಡಿ ಎದುರು ವಿಂಡೀಸ್ ತಂಡ 400 ರನ್ ಗಳ ಬೃಹತ್ ಗುರಿ ನೀಡಿದರೂ ಗೆಲ್ಲುವುದು ಕಷ್ಟ ಎಂದು ಕೆರಿಬಿಯನ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಹೇಳಿದ್ದಾರೆ.
ಶನಿವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಪಂದ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟ ನಿರೀಕ್ಷೆಗಳು ಗರಿಗೆದರಿದೆ. ಸರಣಿಯ ಮೊದಲೆರಡು ಪಂದ್ಯಗಳು ಸಾಕಷ್ಟ ರೋಚಕತೆಯಿಂದ ಅಂತ್ಯವಾಗಿದ್ದು, ಮೊದಲ ಪಂದ್ಯದಲ್ಲಿ ವಿಂಡೀಸ್ ಬೃಹತ್ ಮೊತ್ತದ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯ ಅದ್ಬುತ ಜೊತೆಯಾಟದಿಂದ ಸೋಲು ಅನುಭವಿಸಿತ್ತು. ಇನ್ನು 2ನೇ ಪಂದ್ಯದಲ್ಲಿ ಭಾರತ ನೀಡಿದ್ದ ಬೃಹತ್ ಗುರಿಯನ್ನು ಮುಟ್ಟಲಾಗದೇ ಈ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿತ್ತು.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಮಾತನಾಡಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಹಿಟ್ಟಿಂಗ್ ಸ್ಟಾರ್ ರೋಹಿತ್ ಶರ್ಮಾ ಜೋಡಿಯ ಆಟವನ್ನು ಕೊಂಡಾಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಈ ಜೋಡಿಯ ದಾಖಲೆ ಜೊತೆಯಾಟಕ್ಕೆ ಫುಲ್ ಫಿದಾ ಆಗಿರುವ ಲಾರಾ, ಈ ಜೋಡಿಯ ಎದುರು ವಿಂಡೀಸ್ ತಂಡ 400 ರನ್ ಗಳ ಬೃಹತ್ ಗುರಿಯನ್ನು ನೀಡಿದರೂ ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ.
'ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೈದಾನದಲ್ಲಿದ್ದಾಗ ಎದುರಾಳಿ ತಂಡದ ಯಾವುದೇ ಯೋಜನೆ ಅವರ ಮುಂದೆ ನಡೆಯೋದಿಲ್ಲ. ಎದುರಾಳಿ ತಂಡ ಯಾವುದೇ ರೀತಿಯ ರನ್ ಗುರಿ ಇಟ್ಟಿದ್ದರೂ ಅದು ತೀರಾ ಕಡಿಮೆಯೇ ಎಂದು ಲಾರಾ ಹೇಳಿದ್ದಾರೆ. ಅಂತೆಯೇ ಟೀಂ ಇಂಡಿಯಾದ ಆರಂಭಿಕ ಮೂವರು ಆಟಗಾರರು ತುಂಬಾ ಅನುಭವಿಗಳಾಗಿದ್ದಾರೆ. ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಬಳಿಸಿದ್ದು ಸರಿಯಾಗೇ ಇತ್ತು. ಆದರೆ, ರೋಹಿತ್ ಹಾಗೂ ಕೊಹ್ಲಿ ವಿಕೆಟ್ ಪಡೆದುಕೊಳ್ಳುವಲ್ಲಿ ಎದುರಾಳಿ ತಂಡ ವಿಫಲವಾಯಿತು ಎಂದು ಲಾರಾ ಹೇಳಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 323ರನ್ ಗುರಿಯನ್ನ ಟೀಂ ಇಂಡಿಯಾ ಇನ್ನು 47 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತ್ತು. ಭಾನುವಾರದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 140 ರನ್ ಬಾರಿಸಿದ್ದರೆ, ರೋಹಿತ್ ಶರ್ಮಾ ಅಜೇಯ 152ರನ್ ಗಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiVirat Kohliವಿರಾಟ್ ಕೊಹ್ಲಿRohit Sharmaರೋಹಿತ್ ಶರ್ಮಾBrian Laraಬ್ರಿಯಾನ್ ಲಾರಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


