ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡ್ವೇಯ್ನ್ ಬ್ರಾವೋ ಗುಡ್ ಬೈ, ದೇಶೀಯ ಟಿ20ಗೆ ಲಭ್ಯ!
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ...

Published On :
ಪಾರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
35ರ ಹರೆಯದ ಬ್ರಾವೋ ತಮ್ಮ 14 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಜಾಗತಿಕ ಮಟ್ಟದಲ್ಲಿ ದೇಶೀಯ ಟಿ20 ಕ್ರಿಕೆಟ್ ಆಡಲು ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಬ್ರಾವೋ 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 40, ಏಕದಿನ ಕ್ರಿಕೆಟ್ ನಲ್ಲಿ 199 ಹಾಗೂ ಟಿ20 ಕ್ರಿಕೆಟ್ ನಲ್ಲಿ 52 ವಿಕೆಟ್ ಪಡೆದಿದ್ದಾರೆ.
ಆಲ್ರೌಂಡರ್ ಆಗಿರುವ ಬ್ರಾವೋ ಟೆಸ್ಟ್ ನಲ್ಲಿ 2200, ಏಕದಿನದಲ್ಲಿ 2968 ಹಾಗೂ ಟಿ20ಯಲ್ಲಿ 1142 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 3 ಶತಕ ಹಾಗೂ 13 ಅರ್ಧಶತಕ, ಏಕದಿನದಲ್ಲಿ 2 ಶತಕ ಹಾಗೂ 10 ಅರ್ಧ ಶತಕ, ಟಿ20ಯಲ್ಲಿ 4 ಅರ್ಧ ಶತಕವನ್ನು ಸಿಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
retirementವಿದಾಯWest indiesDwayne Bravoವೆಸ್ಟ್ ಇಂಡೀಸ್international cricketಅಂತಾರಾಷ್ಟ್ರೀಯ ಕ್ರಿಕೆಟ್ಡ್ವೇಯ್ನ್ ಬ್ರಾವೋT20 Club Cricketಟಿ20 ಕ್ಲಬ್ ಕ್ರಿಕೆಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


