6 ಎಸೆತದಲ್ಲಿ ಆರು ಸಿಕ್ಸರ್, ಒಂದೇ ಓವರ್ ನಲ್ಲಿ 37 ರನ್, 12 ಎಸೆತದಲ್ಲಿ ಅರ್ಧಶತಕ!
ಆರು ಎಸೆತದಲ್ಲಿ 6 ಸಿಕ್ಸರ್, ಒಂದೇ ಓವರ್ ನಲ್ಲಿ ಹರಿದುಬಂದಿದ್ದು, ಬರೊಬ್ಬರಿ 37 ರನ್, ಕೇವಲ 12 ಎಸೆತದಲ್ಲಿ ಆರ್ಧಶತಕ... ಇದು ಚೊಚ್ಚಲ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಕಂಡುಬಂದ ದಾಖಲೆ..

Published On :
ಕಾಬುಲ್: ಆರು ಎಸೆತದಲ್ಲಿ 6 ಸಿಕ್ಸರ್, ಒಂದೇ ಓವರ್ ನಲ್ಲಿ ಹರಿದುಬಂದಿದ್ದು, ಬರೊಬ್ಬರಿ 37 ರನ್, ಕೇವಲ 12 ಎಸೆತದಲ್ಲಿ ಆರ್ಧಶತಕ... ಇದು ಚೊಚ್ಚಲ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಕಂಡುಬಂದ ದಾಖಲೆ..
ಹೌದು.. ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಉದಯೋನ್ಮುಖ ಕ್ರಿಕೆಟಿಗ ಹಜರತ್ ಉಲ್ಲಾ ಝಾಜೈ ಆರು ಎಸೆತಗಳಿಗೆ ಆರು ಸಿಕ್ಸರ್ ಸಿಡಿಸಿದ್ದಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಾಲ್ಕ್ ಲೆಜೆಂಡ್ಸ್ ವಿರುದ್ಧದ ಕಾಬೂಲ್ ಜವಾನ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಝಾಜೈ ನಾಲ್ಕನೇ ಓವರ್ನಲ್ಲಿ ಈ ಸಾಧನೆ ಮಾಡಿದ್ದು, ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ವಿಶ್ವಕ್ಕೆ ಸಾರಿದ್ದಾರೆ. ಬಾಲ್ಕ್ ಲೆಜೆಂಡ್ಸ್ ತಂಡದ ಅಬ್ದುಲ್ಲಾ ಮಜಾರಿ ಬೌಲಿಂಗ್ ನಲ್ಲಿ ಆರು ಸಿಕ್ಸರ್ ಬಾರಿಸಿ ಜಾಝೈ ಈ ಸಾಧನೆ ಮಾಡಿದ ಕೆಲವೇ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬಾಲ್ಕ್ ಲೆಜೆಂಡ್ಸ್ ನೀಡಿದ 225 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನುಹತ್ತಿದ ಕಾಬೂಲ್ಪರ ಝಾಜೈ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಎರಡನೇ ಓವರ್ನಲ್ಲಿ 20 ರನ್ ಸಿಡಿಸಿದ ಅವರು ನಾಲ್ಕನೇ ಓವರ್ನಲ್ಲಿ 6 ಎಸೆತಗಳನ್ನು ಸಿಕ್ಸರ್ ಗಟ್ಟಿದರು. ಇದರ ಜೊತೆಗೆ ಒಂದು ವೈಡ್ ಕೂಡ ಸೇರಿ ಒಟ್ಟಾರೆ ಒಂದು ಓವರ್ ನಲ್ಲಿ 37 ರನ್ ದಾಖಲಾದವು.
ಈ ಹಿಂದೆ ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್, ಭಾರತದ ಯುವರಾಜ್ ಸಿಂಗ್ ಟಿ20 ವಿಶ್ವಕಪ್ ನಲ್ಲಿ, ಗ್ಯಾರ್ ಫೀಲ್ಡ್ ಸೋಬರ್ಸ್ ಹಾಗೂ ರವಿಶಾಸ್ತ್ರಿ ಟೆಸ್ಟ್ ಕ್ರಿಕೆಟ್ನಲ್ಲಿ, ಅಲೆಕ್ಸ್ ಹೇಲ್ಸ್ ಹಾಗೂ ರಾಸ್ ವೈಟ್ಲೆ ನಾಟ್ವೆಸ್ಟ್ ಟಿ20 ಕ್ರಿಕೆಟ್ನಲ್ಲಿ, ಪೊಲಾರ್ಡ್ ಬಿಗ್ಬ್ಯಾಸ್ ಅಭ್ಯಾಸ ಪಂದ್ಯದಲ್ಲಿ, ಶಾರ್ದೂಲ್ ಟಾಕೂರ್ ಹಾಗೂ ರವೀಂದ್ರ ಜಡೇಜಾ ಕ್ಲಬ್ ಮಟ್ಟದ ಕ್ರಿಕೆಟ್ನಲ್ಲಿ 6 ಬಾಲಿಗೆ ಆರು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದರು.
ಜಾಝೈ 6 ಸಿಕ್ಸರ್ ಬಾರಿಸಿರುವ ವಿಡಿಯೋವನ್ನು ಆಫ್ಗಾನಿಸ್ತಾನ ಪ್ರೀಮಿಯರ್ ಲೀಗ್ ಆಯೋಜಕರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Yuvraj Singhಯುವರಾಜ್ ಸಿಂಗ್Kabulಕಾಬುಲ್ಸ್ವಾರಸ್ಯOffbeatAfghanistan Premier LeagueHazratullah Zazaiಆಫ್ಗಾನಿಸ್ತಾನ ಪ್ರೀಮಿಯರ್ ಲೀಗ್ಹಜರತುಲ್ಲಾ ಜಾಝೈ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


